You are currently viewing ಪ್ರಯಾಣದ ಪ್ರೇಮ್ ಕಹಾನಿ

ಪ್ರಯಾಣದ ಪ್ರೇಮ್ ಕಹಾನಿ

ಅದು ದೀಪಾವಳಿ ಹಬ್ಬದ ಸಮಯ ಊರಿಗೆ ಹೋಗಲು ಮುಂಚಿತವಾಗಿಯೇ ಒಂದು ವಾರ ರಜೆ ಕೇಳಿದ್ದೆ.
ಅಂದ ಹಾಗೆ ನನ್ನ ಊರು ಯಾವುದು ಎಂದರೆ ಕಡಲ ನಗರಿ. ಕರಾವಳಿ ನನ್ನ ಊರು ನನಗೆ ಊರಿಗೆ ಹೋಗುದು ಅಂದ್ರೆ ತುಂಬಾನೇ ಖುಷಿ ಎಲ್ಲೋ ಫೈವ್ ಸ್ಟಾರ್ ಹೋಟೆಲುಗಳಲ್ಲಿ ಸಿಗದ ಊಟ ನಮ್ಮ ಮನೆಯಲ್ಲಿ ಸಿಗುತ್ತೆ . ಬಂಗುಡೆ, ಬೂತಾಯಿ, ಮುರು, ಅಂಜಲ್, ಕುರ್ಚಿ, ಕಲ್ಲುರು, , ಇನ್ನು ಅನೇಕ ಮೀನುಗಳ ರುಚಿ ರುಚಿಯಾದ ಊಟ ನೆನೆಯುವಾಗ ಈಗಲೂ ಬಾಯಲ್ಲಿ ನೀರು ಬರುತ್ತೆ ಬೂತಾಯಿ ಪುಳಿಮುಂಚಿ ಮತ್ತು ಬಾಲೆಎಳೆಯ ಗಟ್ಟಿ ಇದ್ರೆ ಸಾಕು ಅದರ ರುಚಿನೇ ಬೇರೆ..
ಅದೇ ಊರು ನಮ್ಮ ಮಂಗಳೂರು.

ಊರಿಗೆ ಹೋಗಲು ತಯಾರು ಮಾಡಲು ಬಟ್ಟೆ ಬರೆಗಳನ್ನು ಒಂದು ಬ್ಯಾಗ್ ನಲ್ಲಿ ತುಂಬಿಸುತಿದ್ದೆ ಅದೇ ಸಮಯಕ್ಕೆ ನನ್ನ ತಂಗಿಯರು ಹೇಳಿದ್ದ ಮಾತು ನೆನಪಯಿತು ಅಣ್ಣ ಅಣ್ಣ ಮುಂಬೈಯಿಂದ ಬರುವಾಗ ಚಾಕಲೇಟ್ ತರಲು ಮರೀಬೇಡ ಅಂದಿದ್ದರು. ಹಾಗಾಗಿ ಮುಂಚಿನ ದಿವಸನೇ ಊರಿಗೆ ಕೊಂಡುಹೋಗಲು ಬೇಕಾದ ತಿಂಡಿತಿನಿಸು ಇನ್ನಿತರ ವಸ್ತುಗಳನ್ನು ಮುಂಚೆನೇ ತಂದು ಇಟ್ಟಿದ್ದೆ ಅದನ್ನ ಎಲ್ಲ ಬ್ಯಾಗ್ ನಲ್ಲಿ ತುಂಬುವ ಹೊತ್ತಿಗೆ ಸಮಯ 11.15.. ನನಗೆ ಊರಿಗೆ ಹೋಗಲು 12.00 ಗಂಟೆಗೆ ಗೆ ರೈಲು.. ಇನ್ನು ಈ ದೊಡ್ಡ ಸಿಟಿ ಎತ್ತನೋಡಿದರಲ್ಲೂ ವಾಹನಗಳ ದಟ್ಟಣೆ ಜನಜಂಗುಳಿ ಎಲ್ಲವೂ ನನಗೆ ತಲೆ ಕೆಡಿಸುವಂತೆ ಆಯಿತು.

ಇನ್ನು ತಡ ಆದ್ರೆ ಸರಿಯಾದ ಸಮಯಕ್ಕೆ ರೈಲು ನಿಲ್ದಾಣ ತಲುಪಲು ಕಷ್ಟ ಆಗ್ಬಹುದು ಅನ್ಕೊಂಡು ಓಲಾ (ola) ಹತ್ತಿದೆ.
ನನ್ನ ರೂಮ್
ಇದ್ದದ್ದು ಮರೋಲ್ ಅಂದೇರಿ ಈಸ್ಟ್ ನಲ್ಲಿ ಅಲ್ಲಿಂದ (LTT) ಲೋಕಮಾನ್ಯ ತಿಲಕ್ ಟರ್ಮಿನಸ್ ನಿಲ್ದಾಣಕ್ಕೆ ತಲುಪಲು 30 ನಿಮಿಷ ಬೇಕಾಗಿತ್ತು ಸುಮಾರು 12.00 ಹೊತ್ತಿಗೆ ರೈಲು ನಿಲ್ದಾಣಕ್ಕೆ ಬಂದೆ.

ಸುಮಾರು 12.10 ಕ್ಕೆ LTT TVC SPL :06345 ಸಂಖ್ಯೆ ಹೊಂದಿರುವ ರೈಲು ಬಂತು ನಾನು ಅವಸರದಲ್ಲಿಯೇ ಬ್ಯಾಗ್ ನ್ನು ಹೆಗಲ ಮೇಲೆ ಹಾಕಿ ರೈಲು ಹತ್ತಿದೆ. A/C B1ಮೂರನೇ ದರ್ಜೆಯೇ ಬೋಗಿಯಲ್ಲಿನ ಸೀಟು ನಂಬರ್ 58 ರಲ್ಲಿ ಕುಳಿತ ನನಗೆ ತುಂಬಾ ಹಸಿವಾಗಿತ್ತು. ಇನ್ನು ಇನ್ನೊಂದು ಕಡೆ ರೈಲು ನಿಲ್ಲುವಾಗ ಊಟ ತೆಗೆದುಕೊಂಡು ಊಟ ಮಾಡೋಣ ಅನ್ಕೊಂಡೆ ಅಸ್ಟೊತ್ತಿಗೆ ತಿಂಡಿ ಮಾರುವವರು ಬಂದ್ರು. ನಾನು ತಿಂಡಿ ತಿಂದು ನೀರು ಕುಡಿದು ಸ್ವಲ್ಪ ತಾತ್ಕಾಲಿಕವಾಗಿ ಹೊಟ್ಟೆ ತಣ್ಣಗೆ ಮಾಡಿದ ನನಗೆ ಸ್ವಲ್ಪ ನಿದ್ದೆ ಬಂದಂತೆ ಆಯಿತು.

ರೈಲು ಥಾಣೆ ನಿಲ್ದಾಣಕ್ಕೆ ತಲುಪುವಾಗ. ನಾನು ಎಚ್ಚರಗೊಂಡೆ ಅವಾಗ ಸಮಯ ಮದ್ಯಾಹ್ನ 1.00 ಗಂಟೆ ಆಗಿತ್ತು.
ಅಷ್ಟೊತ್ತಿಗೆ ನಾನು ಕುಳಿತ ಬೋಗಿಯ ಮುಂದಿನ ಬಾಗಿಲಲ್ಲಿ ಒಂದು ಕುಟುಂಬವೇ ರೈಲು ಹತ್ತಿದರು.
ಸೀಟು ನಂಬರ್ 60 ರಿಂದ 68 ರ ಮದ್ಯ ಅ ಒಂದು ಕುಟುಂಬವೇ ತುಂಬ ಹೋದರು.

ಅಷ್ಟೊತ್ತಿಗೆ ರೈಲು ಹೊರಡಲು ಸಿಗ್ನೆಲ್ ಬಂತು ಅ ಕುಟುಂಬದ ಸದಸ್ಯರಲ್ಲಿ ಒಬ್ಬ ಮಾನಸ ಎಲ್ಲಿ ಬಿಸ್ಕೆಟ್ ತರಲು ಹೋದವಳು ಬಂದಿಲ್ಲ ನೋಡಿ ನೋಡಿ ಅಂದಾಗ ಒಬ್ಬಳು ಬಿಳಿ ಚೂಡಿದಾರ ಹಾಕಿದ ಹುಡುಗಿ ಓಡೋಡಿ ಬಂದು ರೈಲು ಏರಿದಳು.

ಅವಳು ಓಡಿಬಂದಾಗ ಅವಳ ಎದೆ ಬಡಿತ ಕೇಳಿಸುವಷ್ಟು ಜೋರಾಗಿ ಉಸಿರು ಎಳೆಯುತಿದ್ದಳು.
ಅವಳು ಅವರ ಕುಟುಂಬದ ಮದ್ಯ ಹೋಗಿ ಕುಳಿತಿದ್ದರಿಂದ ಅವಳ ಮುಖ ನನಗೆ ಕಾಣಿಸುತ್ತಿರಲಿಲ್ಲ.

ನನಗೆ ಪುಸ್ತಕ ಓದುವ ಹವ್ಯಾಸ ನನಗೆ ಸುಮ್ಮನೆ ಕೂರಲು ಬೋರ್ ಅನಿಸಿದಾಗ ಪುಸ್ತಕ ಓದುವ ಅಭ್ಯಾಸ ಆದ್ದರಿಂದ ನನ್ನ ಬ್ಯಾಗ್ ನಿಂದ “Jeffery Archer ” ಬರೆದಿರುವ “There by hangs a tale ” ಪುಸ್ತಕವನ್ನು ಕೈಗೆತ್ತಿಕೊಂಡು ಓದತೊಡಗಿದೆ.

ಅಷ್ಟೊತ್ತಿಗೆ ಸಮಯ ಬೇರೆ ಸಂಜೆ 4.00ಗಂಟೆ ಆಗಿತ್ತು ನನ್ನ ಎದುರು ಸಿಂಗಲ್ ಸೀಟುಗಳು ಕಾಲಿ ಕಾಲಿಯೇ ಆಗಿತ್ತು ಆಗ ಸಂಜೆಯ ಪ್ರಕೃತಿ ಸೊಬಗು ರೈಲಿನಲ್ಲಿ ತುಂಬಾ ಚೆನ್ನಾಗಿಯೇ ಕಾಣುತಿತ್ತು..
ಸಂಜೆಯ ಸೌಂದರ್ಯ ಸವಿಯಲು ಅ ಕುಟುಂಬದಲ್ಲಿದ್ದ ಪುಟ್ಟ ಹುಡುಗಿ ನನ್ನ ಎದುರಿನ ಸೀಟ್ನಲ್ಲಿ ಬಂದು ಕುಳಿತಳಲು..

ಅದೇ ಸಮಯಕ್ಕೆ ಮಾನಸ ಬಂದು ನನ್ನ ಎದುರು ದಿಕ್ಕಿನಲ್ಲಿದ್ದ ಸೀಟ್ನಲ್ಲಿ ಬಂದು ಕುಳಿತಳು..
ಅವಳ ಸೌಂದರ್ಯವನ್ನು ವರ್ಣಿಸಲು ಪದಗಳನ್ನು ಹುಡುಕಲು ಕನ್ನಡ ನಿಗಂಟು ಓದ ಬೇಕು ಅನ್ನೋ ಹಾಗೆ ಬಾಸವಾಗಿ ಅವಳ ಸೌಂದರ್ಯಕ್ಕೆ ಸಾಟಿಯೇ ಇಲ್ಲದಾಯಿತು.

ನಾನು ಪುಸ್ತಕವನ್ನೆ ಓದುತ್ತಾ ಕುಳಿತ ನನಗೆ ಅ ಹುಡುಗಿ ನನ್ನನ್ನೇ ಒಂದು ಕಣ್ಣಲ್ಲಿ ನೋಡುತಿದ್ದಳು ನಾನು ಯಾರೋ ನನ್ನ ಹಿಂದಿನ ಸೀಟ್ ನಲ್ಲಿ ಅವಳ ಪರಿಚಯದವರು ಇರಬಹುದು ಅನ್ಕೊಂಡು ಸುಮ್ಮನೆ ತಲೆ ತಗ್ಗಿಸಿ ಓದುತ್ತಾ ಕುಳಿತೆ..

ಆದರೆ ಅವಳು ಪದೇ ಪದೇ ನನ್ನ ಕಡೆನೇ ನೋಡುತ್ತಾ ಕುಳಿತಿದ್ದಳು ನಾನು ಯಾರು ನನ್ನ ಹಿಂದೆ ಇರಬಹುದು ಎಂದು ಹಿಂದೆ ತಿರುಗಿ ನೋಡಿದೆ
ನನ್ನ ಹಿಂದೆ ಯಾರು ಇರಲಿಲ್ಲ .. ಮತ್ತೆ ಯಾರನ್ನ ನೋಡುತಿದ್ದಾಳೆ ಎಂದು ಮಾನಸಳನ್ನ ನೋಡಿದೆ ಅವಳು ನನ್ನ ನೋಡಿ ನಾಚುತ್ತಾ ಮೋಹಕ ನಗೆ ಬೀರಿದಳು..
ನನಗೆ ಅವಳ ಮುಖವನ್ನು ನೋಡಲು ಅಸಾಧ್ಯವಾಗಿ ಹೋದೆ ಅವಳ ಕಣ್ಣ ನೋಟದಲ್ಲಿ ಅ ನೋಟದ ತೀಕ್ಷಣತೆಗೆ ನಾನು ಸುಟ್ಟು ಹೋಗುತ್ತೇನೋ ಅನ್ನೋ ಹಾಗೆ ಆಯಿತು.
ನೀಳವಾದ ಅವಳ ಕಣ್ಣುಗಳು ಹವಳದಂತಹ ಅವಳ ತುಟಿಗಳು. ಮುತ್ತುಗಳನ್ನೇ ಪೋಣಿಸಿ ಮಾಡಿದಂತಾಗ ಅವಳ ಹಲ್ಲುಗಳು. ಒಟ್ಟಾರೆಯಾಗಿ ದೇವಾ ಕನ್ಯೆಯೇ ಧರೆಗಿಳಿದು ಬಂದ ಹಾಗೆ ಇದ್ದ ಅವಳ ಸೌಂದರ್ಯಕ್ಕೆ ನಾನು ಮಂಜಿನಂತೆ ಕರಗಿ ನೀರಾಗಿ ಹೋದೆ.

ಸಂಜೆಯ ಬಿಸಿಲು ಅವಳ ಮುಖಕ್ಕೆ ಬೀಳುವಾಗ ಅವಳ ಮುಖವನ್ನು ಅವಳ ಶಾಲು ಅವಳ ಮುಖವನ್ನು ರಕ್ಷಿಸುವಂತೆ ಮುಚ್ಚುತಿತ್ತು..

ಅವಳ ಪ್ರತಿಯೊಂದು ನೋಟವು ನನ್ನ ಎದೆ ಬಡಿತದ ವೇಗವನ್ನು ಹೆಚ್ಚೆಚ್ಚುಗೊಳಿಸುತಿತ್ತು..
ಅವಳ ಮೋಹದ ಬಲೆಗೆ ಸಿಲುಕಿದ ಮೀನಿನಂತೆ ಒದ್ದಾಡುತ್ತಾ ಒದ್ದಾಡುತ್ತಾ ನನ್ನ ಕೈಯಲ್ಲಿದ್ದ ಪುಸ್ತಕ ಕೈಜಾರಿ ಕೆಳಗೆ ಬಿದ್ದಾಗ ಅವಳು ನಕ್ಕಳು..!!

. ನನಗೆ ಏನು ಆಗುತ್ತಿದೆ ಅನ್ನೋದೇ ನನಗೆ ತಿಳಿಯದಂತೆ ಆಯಿತು ನಾನು ಎಲ್ಲಿ ಇದ್ದೇನೆ ಅನ್ನೋ ಪ್ರಜ್ಞೆಯೇ ಕಳೆದುಕೊಂಡೆ ಯಾರು ಬರದ ನನ್ನ ಹೃದಯದ ಬಾಗಿಲನ್ನು ಪ್ರಪ್ರಥಮವಾಗಿ ನನ್ನ ಹೃದಯದ ಗುಡಿಯ ಬಾಗಿಲನ್ನು ತಟ್ಟಿದಳು ಮಾನಸ..

ನನಗೆ ಒಂದುಕಡೆ ಖುಷಿ ಒಂದು ಕಡೆ ಭಯ ಎಲ್ಲವೂ ಒಟ್ಟಾಗಿ ನನ್ನ ದೇಹ ಬಿಸಿಯಾಗಿ ಬೆವತು ಹೋದೆ..

ಮುಖ ತೊಳೆಯಲು ಎದ್ದು ನಿಂತ ನನಗೆ ಕಾಲುಗಳು ನಡುಗತೊಡಗಿತ್ತು ಉಸಿರು ಜಾಸ್ತಿಯಾಗಿ ಉಸಿರು ಕಟ್ಟುವಂತೆ ಆಗಿ ರೈಲಿನ ಕಂಬಿಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಭಾರವಾದ ಹೆಜ್ಜೆಯನ್ನು ಇಡುತ್ತಾ ಮುಖತೊಳೆಯಲು ಹೋದೆ ಮಾನಸ ಮಾತ್ರ ನನ್ನನ್ನೇ ಹಿಂತಿರುಗಿ ನೋಡುತ್ತಾ ಕುಳಿತಿದ್ದಳು.

ನಾನು ಮುಖತೊಳೆದು ಬಂದು ಬಾಗಿಲಿನಲ್ಲಿ ಸ್ವಲ್ಪ ವಿಶ್ರಾಂತಿಗೆಂದು ಗಾಳಿಯನ್ನು ಸೇವಿಸುತ್ತಾ ಬಾಗಿಲಿನಲ್ಲಿ ನಿಂತಿದ್ದೆ.

ಸ್ವಲ್ಪಹೊತ್ತಲ್ಲಿ ಯಾರೋ ನನ್ನ ಹಿಂದೆ (go talk him)
ಹೋಗು ಮಾತಾಡು ಅಂದ ಹಾಗೆ ಆಯಿತು..
ನಾನು ಹಿಂತಿರುಗಿ ನೋಡುವಾಗ ಅ ಪುಟ್ಟ ಹುಡುಗಿ ಮಾನಸಳನ್ನು ಒತ್ತಾಯ ಮಾಡುತಿದ್ದಳು.. ಮಾನಸ ನಾಚಿಕೆಯಿಂದ ನನ್ನನ್ನ ನೋಡಿ ತಲೆ ತಗ್ಗಿಸಿ ನಿಂತಳು.

ನಾನು ಇನ್ನೇನು ಈಗ ನನ್ನ ಹತ್ತಿರಬರುವಳು ಬಂದು ಮಾತನಾಡಿಸುವಳು ಅನ್ಕೊಂಡೆ ಆದರೆ ಅವಳು ದೂರದಲ್ಲಿಯೇ ಮೌನವಾಗಿ ತನ್ನ ಪ್ರೇಮದ ಭಾಷೆಯಲ್ಲಿ ಕಣ್ಣಲೇ ಮಾತನಾಡುತಿದ್ದಳು.
ನಾನೇ ಮುಂದುವರಿದು ಮಾತನಾಡೋಣ ಅನ್ಕೊಂಡೆ ಆದರೆ ಅ ಧೈರ್ಯ ಸಾಲದೇ ನನ್ನ ಸೀಟ್ ನಲ್ಲಿ ಕುಳಿತು ಕೊಳ್ಳಲು ಹೋದೆ ನಾನು ಅವಳ ಹತ್ತಿರ ಹೋಗುವಾಗ ಅವಳ ಬಿಸಿ ಉಸಿರು ಸೋಕಿ ಒಂದು ಕ್ಷಣ ತಟಸ್ಥನಾಗಿ ನಿಂತೆ ಅವಳು ನಾಚುತ್ತಾ ಹೋಗಿ ಕುಳಿತಳು.

ಅವಾಗ ಸಮಯ ರಾತ್ರಿ 9.30 ಆಗಿತ್ತು ರೈಲು ಗುಡ್ಡಗಾಡಿನ ಪ್ರದೇಶದಲ್ಲಿ ವೇಗವಾಗಿ ಚಲಿಸುತಿತ್ತು. ರಾತ್ರಿಯ ತಂಪಾದ ಗಾಳಿಗೆ ನಾನು ನಿದ್ದೆಗೆ ಜಾರಿದೆ..

ಸುಮಾರು 10.00ಗಂಟೆ ಹೊತ್ತಿಗೆ ನನಗೆ ಎಚ್ಚರ ವಾಗಿ ಸುತ್ತಲೂ ನೋಡುತ್ತೇನೆ ಎಲ್ಲರು ಗಾಢ ನಿದ್ರೆಯಲ್ಲಿ ಮಲಗಿದ್ದರು.
ರೈಲಿನಲ್ಲಿ ನಿಶಬ್ದ ಆವರಿಸಿತು. ನನ್ನ ಎದುರು ಸೀಟಿನಲ್ಲಿ ಮಾನಸ ರೈಲಿನ ಕಿಟಕಿಗೆ ತಲೆ ಇಟ್ಟು ಮಲಗಿದ್ದಳು.
ಅ ರಾತ್ರಿಯ ತಂಪಾದ ಗಾಳಿಗೆ ಅವಳ ಮುಖ ಪರದೆ ಅವಳ ಮುಖವನ್ನು ಮುಚ್ಚಿ ತೆರೆಯುವಂತೆ ಅವಳ ಮುಖದಲ್ಲೇ ಆಟ ಆಡುವಂತೆ ಬಾಸವಾಗುತಿತ್ತು.
ಅವಳ ಮುಖಕ್ಕೆ ಅ ರಾತ್ರಿಯ ಹುಣ್ಣಿಮೆಯ ಚಂದಿರನ ಬೆಳಕು ಅವಳ ಮುದ್ದು ಮುಖವೆಲ್ಲ ತುಂಬಿ ಹೋಗಿ ಅವಳ ಮುಖವನ್ನು ಚಂದಿರನ ತಂಪಾದ ಬೆಳಕಿನಿಂದಲೋ ರಕ್ಷಿಸುವಂತೆ ಅವಳ ಮುಖ ಪರದೆ ರಕ್ಷಿಸುತಿತ್ತು
ಮೋಡದ ಮರೆಯಲ್ಲಿ ಮಾಯವಾಗಿ ಪುನಃ ಕಾಣಿಸುವ ಚಂದಿರನಂತೆ ಅವಳ ಮುಖ ಗೋಚರಿಸುತಿತ್ತು. ಅವಳ ಮುಖದ ಹೊಳಪನ್ನು ನೋಡಲು ಸಹಿಸಲಾರದೆ ನಾನು ಒಂದು ಸಲ ಕಣ್ಣು ಮುಚ್ಚಿದೆ.
ಗುಲಾಬಿಯ ದಳಗಳಿಗೆ ದುಂಬಿ ದಾಳಿ ಮಾಡುವಂತೆ ಅವಳ ಮುಖ ಪರದೆ ಅವಳ ತುಟಿಗಳ ಮೇಲೆ ದಾಳಿ ಮಾಡುತಿತ್ತು.
ಅವಳ ಕೇಶ ರಾಶಿಯು ಅವಳ ಮುಖವನ್ನೇ ಅವರಿಸುವಾಗ ನಾನು ಅವಳ ತಲೆಕೂದಲನ್ನು ಮುಖದ ಮೇಲಿಂದ ಬಿಡಿಸಲು ಕೈಚಾಚಲು ಮುಂದಾದೆ ಆದರೆ ಅ ದ್ಯರ್ಯ ಸಾಲದೆ ಹಿಂದೆ ಸರಿದೆ
ನನ್ನ ಕಣ್ಣೇ ಬೀಳಬಹುದು ಅಂದುಕೊಂಡು ಅವಳ ತಲೆ ಕೂದಲು ಅವಳ ಮುಖವನ್ನು ಮುಚ್ಚಿತ್ತು..

ಅವಳನ್ನು ಮಾತನಾಡಿಸಬೇಕು ಅನ್ಕೊಂಡ್ರೆ ಹೇಗೆ ಎಬ್ಬಿಸಲಿ.
ಅವಳು ನಿದ್ದೆಯಲ್ಲಿ ಇರುವಾಗ ಅವಳನ್ನ ಎಬ್ಬಿಸಿ ಮಾತನಾಡಿಸುದು ನನಗೆ ಸರಿ ಕಾಣಲೇ ಇಲ್ಲಾ..

ಆವಾಗಲೇ ಸಮಯ ಬೇರೆ ಬೆಳಗ್ಗೆ 3.00 ಗಂಟೆ ಆಗಿತ್ತು.

ಒಟ್ಟಾರೆಯಾಗಿ ಅವಳನ್ನು ಮಾತನಾಡಿಸದೆ ಗೊಂದಲದಲ್ಲಿ ಸಿಲುಕಿದೆ. ಅವಳೇ ನನ್ನಲ್ಲಿ ಮಾತನಾಡಲು ಬಂದಾಗ ನಾನೇ ಭಯದಲ್ಲಿ ದೂರ ಸರಿದೆ ಆದರೆ ಈಗ ನನಗೆ ಮಾತನಾಡಲು ಮನಸಿರುವಾಗ ಅವಳನ್ನ ಎಚ್ಚರಗೊಳಿಸಿ ಹೇಗೆ ಮಾತನಾಡಿಸಲಿ ಅನ್ನೋ ಯೋಚನೆಯಲ್ಲಿ ಮುಳುಗಿದೆ..

ಅಷ್ಟೊತ್ತಿಗೆ ಸಮಯ 3.20 ಬೇರೆ ಆಗಿತ್ತು ಅವಳ ಕುಟುಂಬದ ಎಲ್ಲಾ ಸದಸ್ಯರು ಎದ್ದು ತಮ್ಮ ತಮ್ಮ ಬ್ಯಾಗ್ ಗಳನ್ನ ಕೈಗೆತ್ತಿಕೊಂಡರು.

ಮಾನಸಾಳ ಅಮ್ಮ ಬಂದು ಮಾನಸ ಮಾನಸ ಎದ್ದೇಳೇ ಉಡುಪಿ ಬಂತು ಎದ್ದೇಳು ಅಂದಾಗ ಮಾನಸ ಎಚ್ಚರಗೊಂಡು ನನ್ನ ಕಡೆ ದಿಟ್ಟಿಸಿ ನಿರಾಶಾದಾಯಕಳಾಗಿ ನೋಡುತಿದ್ದ ಅವಳ ಮುಖವನ್ನು ನೋಡಲು ಆಗದೆ ನಾನು ತಲೆ ತಗ್ಗಿಸಿ ಕುಳಿತೆ.
ಅವಳು ಉಡುಪಿ ನಿಲ್ದಾಣದಲ್ಲಿ ರೈಲಿನಿಂದ ಇಳಿದು ಹೋದಳು ಸ್ವಲ್ಪ ದೂರ ಹೋದವಳು ಹಿಂದೆ ತಿರುಗಿ ನನ್ನನೋಡಿ ಕೊನೆಯ ನೆಗೆಯನ್ನು ಬೀರಿದಳು.
ಅಷ್ಟೊತ್ತಿಗೆ ರೈಲು ನಿದಾನಕ್ಕೆ ಹೊರಡಲು ಶುರು ಆಯಿತು ಅವಳು ದೂರ ದೂರ ಕ್ರಮಿಸಿದಂತೆ.
ಅವಳು ಮಾತ್ರ ನನ್ನ ಮನಸಿಗೆ ಹತ್ತಿರ ಹತ್ತಿರ ಆದಳು ಮಾನಸಳನ್ನು ಬಿಟ್ಟುಹೋಗಲು ನನ್ನಿಂದ ಸಾಧ್ಯ ವಾಗದೆ ಹೋಯಿತು

ಇಲ್ಲಾ ರೈಲಿನಿಂದ ಇಳಿಯೋಣ ಅನ್ಕೊಂಡು ಬ್ಯಾಕ್ ಎತ್ತಿಕೊಂಡೆ ಅಷ್ಟೊತ್ತಿಗೆ ರೈಲು ವೇಗವಾಗಿ ಹೋಗುತಿತ್ತು.

ಬೆಳಗ್ಗೆ ಸಮಯ 4.45 ರ ಹೊತ್ತಿಗೆ ಮಂಗಳೂರು ಜಂಕ್ಷನ್ ಗೆ ರೈಲು ಬಂದು ನಿಂತಿತ್ತು..

ನನಗೆ ರೈಲಿನಿಂದ ಇಳಿಯಲು ಮನಸು ಒಪ್ಪಲಿಲ್ಲ… ಅಷ್ಟು ದುಃಖ್ಖ ಆಗಿತ್ತು ನನ್ನ ಮನಸಿಗೆ.

ಸ್ವಲ್ಪವೂ ಮಾತನಾಡದೆ ಬರಿ ಮೌನದಲ್ಲೇ ತನ್ನ ಪ್ರೀತಿಯನ್ನು ತಿಳಿಸಿ ಹೋದಳು.
ಅವಳ ಕಣ್ಣಲ್ಲೇ ಅವಳ ಹೃದಯದ ಪ್ರತಿ ಬಡಿತವು ನನ್ನ ಪ್ರೀತಿಗಾಗಿ ಹಂಬಲಿಸುವಂತೆ ಕಾಣುತಿತ್ತು..

ಇವೆಲ್ಲವನ್ನೂ ನೆನೆದು ನನ್ನ ಮೇಲೆಯೇ ನನಗೆ ನಿರಾಶೆಯಾಗಿ ಕಲ್ಲು ಬೆಂಚಿನಮೇಲೆ ಕುಳಿತೆ ನನ್ನ ಕಣ್ಣಂಚಲಿ ನೀರು ಹರಿದು ನನ್ನ ಅಂಗೈಯಲ್ಲಿ ಬಿತ್ತು..

ಆದರೆ ಅವಳು ನನಗೆ ಸಿಗುವಳೋ. ನನ್ನ ಪ್ರೀತಿ ಪವಿತ್ರವಾದರೆ ಅವಳು ನನಗೆ ನಿಕ್ಕೆ ನೀಗುತ್ತಾಳೆ ಅನ್ನೋ ಭರವಸೆಯಲ್ಲಿ ನನ್ನ ಬದುಕಲ್ಲಿ ಕಾದುಕುಳಿತೆ… !!!

ದೀಪಕ್ ರಾಜ್ ಶೆಟ್ಟಿ
ಮಾರೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ