You are currently viewing ಮಹಾತ್ಮ

ಮಹಾತ್ಮ

ಕೇಳ ಬನ್ನಿರಿ ಒಂದು ಕಥೆಯ
ಹೇಳುವೆನು ನಾ ಒಬ್ಬ ವ್ಯಕ್ತಿಯ
ಶಸ್ತ್ರವಿಲ್ಲದೆ ಹೋರಾಡಿದ ಗಾಥೆಯ
ಮಹಾತ್ಮನಾಗಿ ಮೆರೆದ ಕಥೆಯ

ಜಗತ್ತಿಗೆಲ್ಲ ಒಬ್ಬನೇ ತಾತನು
ಮಹಾತ್ಮಾ ಗಾಂಧೀ ತಾತನು
ತಾತನು ನಮ್ಮೆಲ್ಲರ ಮನದಲ್ಲಿ
ಮಾಡಿ ಧೃಢಸಂಕಲ್ಪ ಸಹನೆಯಲ್ಲಿ

ಸಂಕಲ್ಪದಿ ಶುರುವಾಯಿತು ಸತ್ಯಾಗ್ರಹವು
ಸತ್ಯಾಗ್ರಹದಿ ಸತ್ಯ ಅಹಿಂಸಾವಾದವು
ಅಹಿಂಸಾವಾದದಿ ಸಮರಸ ಶಾಂತಿಯು
ಶಾಂತಿಯಿಂದ ಹುಟ್ಟಿತು ಚಳವಳಿಯು

ಚಳವಳಿಯಿಂದ ದೊರೆಯಿತು ಸ್ವಾತಂತ್ರ್ಯವು
ಸ್ವಾತಂತ್ರ್ಯ ಸಂಗ್ರಾಮದಿ ಕಳೆಯಿತು ದಾಸ್ಯವು
ದಾಸ್ಯದ ಸುರುಳಿ ಸಂಕೋಲೆ ಕಡಿದರು
ಮಹಾತ್ಮ ಗಾಂಧೀಯೇ ರಾಷ್ಟ್ರಪಿತರು

ಅಹಿಂಸಾವಾದದಲಿ ಅಡಗಿದೆ ದಿವ್ಯ ಶಕ್ತಿ
ಶಕ್ತಿಯಲಿ ಅಡಗಿದೆ ಅದಮ್ಯ ದೇಶ ಭಕ್ತಿ
ಆಶಾವಾದಿ ಆಗಿ ಹೊಮ್ಮಿಸಿದರು ಆಸಕ್ತಿ
ಮಹಾತ್ಮರಾಗಿ ಹೋರಾಡಿ ಪಡೆದರು ಮುಕ್ತಿ

ಶ್ರೀಮತಿ ದೀಪಾಲಿ ಸಾಮಂತ
ದಾಂಡೇಲಿ, ಉತ್ತರ ಕನ್ನಡ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.