You are currently viewing ಲೇಖನಿಯ ಸಾಧಕ

ಲೇಖನಿಯ ಸಾಧಕ

ರಾಷ್ಟ್ರ ಮೆಚ್ಚುವಂತ ದಿಟ್ಟ ನಾಯಕ
ಶ್ರೇಷ್ಠ ಬರಹ ರಚಿಸಿ ಸಂವಿಧಾನಿಕ
ಮೆಟ್ಟಿಲಂತೆ ನಿಂತರು ದಲಿತ ಸೇವಕ
ದೇಶ ರಕ್ಷಕ ಲೇಖನಿಯ ಸಾಧಕ..!

ರಾಮ ಸುತನಿವನು ಭೀಮ ಬಲದವ…
ಸೂರಿಲ್ಲದ ಊರಲಿ ನೆರಳಾದವ
ಅನ್ಯಾಯ, ಅಸಮಾನತೆ ಮೆಟ್ಟಿ ನಿಂತವ …
ಅಸ್ಪೃಶ್ಯರ ಬಾಳಿಗೆ ಬೆಳಕು ತಂದವ…

ಬುದ್ಧ ಬಸವನ ತತ್ವ ಪಾಲಿಸಿ
ಸಿದ್ಧನಾದನು ಕಾನೂನು ಕಲಿಸಿ
ಶಿಕ್ಷಣದಿ ಸಾರಿದ ಐಕ್ಯತೆಯನು,
ಶಿಲ್ಪಿ ಎನಿಸಿದ ಸಂವಿಧಾನ ರೂಪಿಸಿ…

ಶಿಷ್ಟರ ರಕ್ಷಣೆ ಇವನ ಕಾಯಕ
ದುಷ್ಟ ಜನರ ಪಾಲಿನ ಸಂಹಾರಕ
ಬೆಟ್ಟದಂತಿರುವ ಗ್ರಂಥ ಪಾಲಕ
ಬರೆದು ಬೆಳೆಸಿದ ಶಾಸನೀಯ ರೂಪಕ….

ಗಣರಾಜ್ಯದ ಘನ ಶಿಖರವು
ಜ್ಯಾತ್ಯಾತೀತತೆ ಮೆರೆದ ಈ ಜ್ಯೋತಿಯು
ಮೂಲಭೂತ ಹಕ್ಕುಗಳ ಜನ್ಮದಾತನು
ಮೀಸಲಿರಿಸಿದ ತನ್ನ ಬದುಕನು…

ಸವಿತಾ ದೇಶಪಾಂಡೆ
ತಾವರಗೇರಾ.
ತಾ: ಕುಷ್ಟಗಿ ಜಿ: ಕೊಪ್ಪಳ
ಮೊ, ನಂ : 7349094205