You are currently viewing ಕಾರ್ಮಿಕ ಬರೀ ಕೆಲಸಗಾರನಲ್ಲ…

ಕಾರ್ಮಿಕ ಬರೀ ಕೆಲಸಗಾರನಲ್ಲ…

ಕಾರ್ಮಿಕನು ಬರಿ ಕೆಲಸಗಾರನಲ್ಲ ಭಾವನೆಗಳ ಮಾಲೀಕ,
ಭಾವನೆಗಳಿವೆ ಕಾರ್ಮಿಕನಿಗೆ ಆತ ಯಂತ್ರವಲ್ಲ…

ಬರೀ ಕೆಲಸಗಾರನಾಗಿ ನೋಡುವುದಲ್ಲ ಕಾರ್ಮಿಕನನ್ನು,
ಭಾವನೆಗಳಿಂದ ಆತ ಬದುಕುತಿರುವನು…

ಬದುಕಿನ ಯಾಂತ್ರಿಕತೆಯಲ್ಲಿ ಕಳೆದುಹೋಗಿರುವ ಕಾರ್ಮಿಕನು,
ಕೇಳುವವರಿಲ್ಲ ಕೆಲಸಗಾರನ ನೋವನು…

ಈ ಬದುಕು ಇರುವುದು ನಗಲು, ಹಸಿವು ನೀಗಿಸಲು
ಆತ ಇರುವನು ಗೌರವವಿರಲಿ…

ಹೌದು ಆತ ಬರೀ ಕೆಲಸಕ್ಕಾಗಿ ಇರುವ ಯಂತ್ರವಲ್ಲ
ಭಾವನೆಗಳ ಮಾಲೀಕ ಆತ, ತನ್ನ ಬದುಕಿನ ಮಾಲೀಕ ಆತ…

ದೀನಬಂಧು ಎಸ್ ಆದಿ
ಜಿಲ್ಲೆ: ಗದಗ-ಬೆಟಗೇರಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ


Leave a Reply