ಮುಚ್ಚಬ್ಯಾಡಿರಿ: ಮುಚ್ಚಬ್ಯಾಡಿರಿ
ಕನ್ನಡ ಸಾಲಿನಾ
ಕನ್ನಡ ಭಾಷೆ ಹಾಳಾಗಿ ಹೋಗತೈತಿ
ತಿಳಿದು ನೋಡಿ ನೀವ
ದೂರದ ಗುಡ್ಡ ಕಣ್ಣಿಗೆ ನುಣ್ಣನೆ
ಕಾಣುವದು ಅಂದ ಚಂದ
ಸಮೀಪ ಹೋದಾಗ ಅದರ ಗತಿ
ಏನಾಗೈತಿ ಅನ್ನೋದ
ಹಳ್ಳಿಗಳಲ್ಲಿ ಮಾತ್ರ ಉಳಿದೈತಿ
ಕನ್ನಡ: ಕರೇನ
ನಗರಗಳಲ್ಲಿ ಕನ್ನಡ ಭಾಷೆ
ಅಷ್ಟಕಷ್ಟೇನ
ಸರಕಾರದವರು ತಿಳಿದು ನೋಡಿರಿ
ಇದರ ಸ್ಥಿತಿ-ಗತಿಯನ್ನ
ಮುಚ್ಚಬ್ಯಾಡಿರಿ `ಮುಚ್ಚಬ್ಯಾಡಿರಿ
ಕನ್ನಡ ಸಾಲಿನಾ
ಬಸಲಿಂಗಯ್ಯ ಮಠಪತಿ
ಕನ್ನಡ ಉಪನ್ಯಾಸಕರು
ವಾಗ್ಲೆವಿ ಸ್ವತಂತ್ರ ಪ.ಪೂ ಕಾಲೇಜು,
ಶೀಗಿಕೇರಿ-ಬಾಗಲಕೋಟೆ.
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.