ತುಟಿಗೆ ತುಟಿ
ಸೋಕಲು, ಕಣ್ಣುಗಳೆ
ತಾನೇ ತೊಟ್ಟಿಲು
ಅವನೇ ಬೇಕು
ಬದಲಿಸಲು ಬದಿ
ಋತುಮಾನಂತೆ
ನನ್ನೊಳಗಿನ
ಭಾವದೇರಿಳಿತ,ನಾ
ಸಖಿಯ ಭಕ್ತ
ಮಂಗಳಾಂಗಿನಿ
ಬೆಳಗಿದಳು ಎತ್ತಿ
ಕಂಗಳಾರುತಿ
ಅನಾಥ ತಾಯಿ
ಹೆತ್ತಳು ವೈಫಲ್ಯವ
ತಂದೆಯ ಯಶ
ಹೋಳಿ ಏತಕೆ,
ದಹನವೇ ಆಗಲಿ
ಮನೋಕಾಮನೆ
ನರಕದಲಿ
ಹುಡುಕದಿರು ನಾಕ
ಬಂದದ್ದೆ
ತೈಲವೂ ಖಾಲಿ
ಏದುಸಿರು ಬಿಟ್ಟಿದೆ
ಹಣತೆ ಕೂಡಾ
ದೂರು ಕೊಟ್ಟವ
ಒಬ್ಬ,ಶಿಕ್ಷೆಗೆ ಗುರಿ
ಆದ ಇನ್ನೊಬ್ಬ
ಚಿರಾಯು ಆತ್ಮ
ನಶಿಸುವ ಶರೀರ
ಗೂಡಿನಲ್ಲಿದೆ
ಎ ಎಸ್ ಮಕಾನದಾರ
ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.