ಅವರಿವರು
ಎನ್ನದೇ; ಸರ್ವರಿಗೂ
ಹಂಚಿ ಉಣ್ಣೋಣ.
ತಿನ್ನುವ ರೊಟ್ಟಿ
ಹಸಿದ್ಹೊಟ್ಟೆಗೆ ಹಂಚು;
ದಾರಿಯ ಬುತ್ತಿ
ಬೆರಳಾಡಿತು
ವೀಣೆಯ ಮೇಲೆ ನಾದ;
ದಣಿದ ತಂತಿ
ಸಮನಿಸಲಿ
ಸರ್ವರ ಎದೆಯಲಿ;
ಸಮತ್ವ ಭಾವ
ತಲ್ಲಣದಲಿ
ಗಾಯಗೊಂಡಿದೆ ಎದೆ;
ಪ್ರೀತಿ ಬಿಕರಿ.
ಆಗಸದಲಿ
ಚದುರಿದ ಚಂದಿರ
ನಕ್ಷತ್ರ ಬಿಕ್ಕು!
ಗಂಗಾಧರ ಅವಟೇರ
ಶ್ರೀ ಮಹೇಶ್ವರ ಪ.ಪೂ.ಕಾಲೇಜು ಇಟಗಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.