You are currently viewing ಗಝಲ್

ಗಝಲ್

ಸಡಿಲ ಬಂಧ ಬಿಗಿಗೊಳಿಸಲು ರವಿಯ ಕರೆದು ನಡೆದೆ ನೋಡು.

ಸಡಿಲ ಬಂದ ಬಿಗಿಗೊಳಿಸಲು ರವಿಯ ಕರೆದು ನಡೆದೆ ನೋಡು
ಮಡಿಲ ಕಂದ ಅಂದದಿ ನಗುತಿಹ ಕವಿಯ ಸೆಳೆದು ತೊಡೆದೆ ನೋಡು.

ಮಾಗಿಯ ಚಳಿಯಿದು ಕಂಬಳಿ ಹೊದೆಯದೆ ಮಲಗಲು ಸಾದ್ಯವೇ
ಬಾಗಿಲ ಬಳಿಯಲಿ ನಿಂದು ಕದಲದೆ ಕೇಳಿಸಿಕೊಂಡು ಜಡೆದೆ ನೋಡು.

ಬಾಳ ನೌಕೆಯ ಪಯಣದಲಿ ಜೊತೆಯಾಗಿ ಹಿತವಾಗಿ ಸಾಗಬೇಕಿದೆ
ಗಾಳ ಹಾಕುತ ಕದನದಲಿ ಮುನ್ನುಡಿ ಬರೆಯುವ ಸಂಚು ಕಡೆದೆ ನೋಡು

ಬಿಡಿಸದ ಬಲವಾದ ನಂಬಿಕೆಯೆ ಬದುಕಿನ ಆಶಾಕಿರಣ ತಿಳಿದುಕೊ ಸಖ
ಕಾಡಿಸದೆ ಅನುನಯದಿ ಅಕ್ಕರೆಯ ಬಿನ್ನಹ ಕೊಟ್ಟು ಹೊಡೆದೆ ನೋಡು.

ಕೂಡಿ ಇರುವೆ ಒಲವ ಪಥದಿ ದೂರ ಸಹಿಸಳು ಜಯಾ ಶಪಥದಿ
ಆಡಿ ನಲಿದು ಒಂದಾಗಿ ಬೆಸೆದ ಜೋಡಿ ಅಗಲಿದರೆನು ಚಂದ ತಡೆದೆ ನೋಡು

ಜಯಶ್ರೀ ಭ ಭಂಡಾರಿ
ಬಾದಾಮಿ.


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.