SKU: 17618

Varada Teerada Kategalu

Original price was: ₹160.00.Current price is: ₹150.00.

Book Details
Author : Raveendra Muddi
Publisher : Veeraloka Books Pvt Ltd
ISBN-13 : 9788197416927
Language : Kannada
Binding : Paper Back

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಹಿಂದಿನದು ಬೇರೆ, ಇಂದು ಮಾತ್ರ ಮನುಷ್ಯನ ಜೀವನದ ಹಲವು ವ್ಯವಹಾರಗಳಲ್ಲಿ ಸಾಹಿತ್ಯವು ಒಂದು ಎನ್ನುವುದರತ್ತ ಅದರ ಬೆಳವಣಿಗೆ ಇದೆ. ಆದರೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಂದ ಹೊರತಾದ ಮರುಕ್ಷಣವೇ ಸಾಹಿತ್ಯವೂ ಸಗಟು ಅಷ್ಟೇ. ಕಾರಣ ಈ ಅಪಾಯದಿಂದ ಪಾರಾಗುವ ಏಕೈಕ ದಾರಿ ಒಳಗೊಳ್ಳುವಿಕೆ. ಎಲ್ಲವನ್ನೂ ಎಲ್ಲರನ್ನೂ ಒಳಗೊಂಡಷ್ಟೂ ಸಾಹಿತ್ಯ ಸಾರ್ವಜನಿಕ ಮನ್ನಣೆ ಹಾಗೂ ಸಾರ್ವತ್ರಿಕ ಗೌರವಕ್ಕೆ ಪಾತ್ರವಾಗುತ್ತದೆ. ವೀರಲೋಕದ ‘ಉತ್ತರ ಪರ್ವ’ ಇಂಥ ಒಂದು ಸಾರ್ವಕಾಲಿಕ ಕಾಳಜಿಯನ್ನು ಒಳಗೊಂಡ ಯೋಜನೆ. ಏಕತ್ರತೆ ಸಾಹಿತ್ಯದ ಗುರಿಯಲ್ಲ, ಐಕ್ಯತೆ ಅದರ ಆಶಯ. ಆಡಳಿತಾತ್ಮಕವಾಗಿ ಕರ್ನಾಟಕ ನಾಲ್ಕು ವಲಯಗಳಲ್ಲಿ ಹಂಚಿಕೊಂಡಿದ್ದರೂ ಕೂಡ ಅದು ಮನುಷ್ಯ ನೆಲೆಯಲ್ಲಿ ಹಂಚಿಕೊಂಡದ್ದು ಮಾತ್ರ ‘ಹರಿವ ಹೊಳೆಗೂ ಉಂಟು ಎರಡು ತೋಳು ಬೆಸೆಯ ಬೇಕಲ್ಲವೇ ನಮ್ಮ ಬಾಳು’ ಎಂಬ ಸಾಹಿತ್ಯ ಆಶಯವನ್ನೇ. ವೀರಲೋಕದ ಪ್ರಸ್ತುತ ‘ಉತ್ತರ ಪರ್ವ’ ಇದೇ ಆಶಯದ ಮುಂದುವರಿಕೆ. ಪ್ರಕಟಣಾ ವ್ಯವಹಾರದಾಚೆ ಪುಸ್ತಕ ಸಂಸ್ಕೃತಿಯ ವಿಸ್ತಾರವಾಗಿ ಉತ್ತರ ಕರ್ನಾಟಕವನ್ನು ಒಳಗೊಳ್ಳಬೇಕು, ಅಲ್ಲಿಯ ಲೇಖಕರೊಂದಿಗೆ ಒಡನಾಡಬೇಕು, ಎನ್ನುವ ಆಶಯದೊಂದಿಗೆ ಸುಮಾರು ಒಂದು ವರ್ಷ ನಿರಂತರ ಅಲ್ಲಿಯ ಲೇಖಕರನ್ನು ಸಂಪರ್ಕಿಸಿ, ಆಯ್ಕೆ ಕ್ರಿಯೆ ಪೂರ್ಣಗೊಳಿಸಿ, ಇದೀಗ ಪುಸ್ತಕ ರೂಪದಲ್ಲಿ ಹೊಸ ಸಾಹಿತ್ಯ ನಿಮ್ಮ ಕೈ ತಲುಪಿದೆ. ಈ ಕ್ಷಣದಿಂದ ಇದು ಕನ್ನಡ ಚಿಂತನೆಯ-ಸಾಹಿತ್ಯದ ಭಾಗ. ಈ ಮಹತ್ವದ ಯೋಜನೆ, ಪೂರ್ಣಗೊಳ್ಳುವ ನಿಟ್ಟಿನಲ್ಲಿ ನನ್ನನ್ನು ಸಂಪಾದಕನನ್ನಾಗಿ ಆಯ್ಕೆ ಮಾಡಿ ನನ್ನ ನೆಲದ ನೂರಾರು ಲೇಖಕರೊಂದಿಗೆ ಮುಖಾಮುಖಿಯಾಗಲು ಅವಕಾಶ ಮಾಡಿಕೊಟ್ಟ ವೀರಲೋಕದ ಆಡಳಿತ ಮಿತ್ರರಿಗೆ ಹಾಗೂ ವೀರಕಪುತ್ರ ಶ್ರೀನಿವಾಸ್ ಅವರಿಗೆ ನಾನು ಋಣಿಯಾಗಿದ್ದೇನೆ. ಕಾಲ
-ರಾಗಂ, ಸಂಪಾದಕರು “ಉತ್ತರ ಪರ್ವ”

Rating This Book

Reviews

There are no reviews yet.

Be the first to review “Varada Teerada Kategalu”

Your email address will not be published. Required fields are marked *

Top Books