SKU: 19531

ಉಳಿತಾಯ

₹150.00

ಭವಿಷ್ಯದ ಭದ್ರತೆಗೆ ದಾರಿದೀಪ

Book Details
Author : ಡಾ. ಜಿ.ಎನ್. ಜಗನ್ನಾಥ್
Publisher : ಕದಂಬ ಪ್ರಕಾಶನ
ISBN : 9788118295600

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಹಣ ಸಂಪಾದಿಸುವುದು ನಮ್ಮ ಪರಿಶ್ರಮದ ಫಲ; ಅದನ್ನು ಉಳಿಸಿ, ಬೆಳೆಸಿ, ಭವಿಷ್ಯಕ್ಕೆ ಭದ್ರತೆಯಾಗಿ ರೂಪಿಸಿಕೊಳ್ಳುವುದು ನಮ್ಮ ವಿವೇಕದ ಫಲ. ಕುಟುಂಬದ ನೆಮ್ಮದಿ, ಮಕ್ಕಳ ಭವಿಷ್ಯ ಮತ್ತು ನಿವೃತ್ತಿಯ ಬದುಕಿಗೆ ಹಣಕಾಸಿನ ಯೋಜನೆ ಅತ್ಯಗತ್ಯ. ಆದರೆ ಉಳಿತಾಯದ ಹಣವನ್ನು ಎಲ್ಲಿ, ಹೇಗೆ ಹೂಡಿಕೆ ಮಾಡಬೇಕು ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕಾದ್ದು ಇಂದಿನ ಅಗತ್ಯ. ಡಾ. ಜಿ. ಎನ್. ಜಗನ್ನಾಥ್ ಅವರ ಪುಸ್ತಕ ಈ ನಿಟ್ಟಿನಲ್ಲಿ ಯುಕ್ತ ಮಾರ್ಗದರ್ಶನ ನೀಡುತ್ತದೆ. ವಿವಿಧ ರೀತಿಯ ಉಳಿತಾಯದ ಸ್ವರೂಪ, ಎಸ್‌ಐಪಿ ಮೂಲಕ ನಿಯಮಿತ ಹೂಡಿಕೆಯ ಮಹತ್ವ ಮತ್ತು ಎಸ್‌ಡಬ್ಲ್ಯೂಪಿ ಮೂಲಕ ಹಣ ಒಂಪಡೆಯುವ ವಿಧಾನವನ್ನು ಲೇಖಕರು ಸರಳವಾಗಿ ವಿವರಿಸಿದ್ದಾರೆ. ದೊಡ್ಡ ಮೊತ್ತವನ್ನು ಒಮ್ಮೆಲೇ ಹೂಡಿಕೆ ಮಾಡುವವರಿಗೂ, ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಉಳಿಸುವವರಿಗೂ ಈ ವಿಷಯಗಳು ಪ್ರಸ್ತುತವಾಗಿವೆ. ಹೂಡಿಕೆಯ ಜಗತ್ತಿನಲ್ಲಿ ಲಾಭದ ಸಾಧ್ಯತೆಯ ಜೊತೆಗೆ ಅಪಾಯವೂ ಇರುತ್ತದೆ. ನಮ್ಮ ಆದಾಯ, ಗುರಿ ಮತ್ತು ಅಪಾಯ ಸಹಿಸುವ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆ ಮಾಡಬೇಕೆಂಬ ಸಂದೇಶವನ್ನು ಈ ಪುಸ್ತಕ ನೀಡುತ್ತದೆ. ನನ್ನ ದೃಷ್ಟಿಯಲ್ಲಿ, ಈ ಪುಸ್ತಕದ ವಿಶೇಷತೆ ಹಣಕಾಸಿನ ಮಾಹಿತಿಯನ್ನು ಸರಳವಾಗಿ ತಿಳಿಸುವುದರ ಜೊತೆಗೆ ಆರ್ಥಿಕ ಸ್ವಾवलಂಬನೆಯ ಅರಿವು ಮೂಡಿಸುವುದಾಗಿದೆ. ಯುವಜನರಿಂದ ಹಿಡಿದು ನಿವೃತ್ತ ಜೀವನ ನಡೆಸುತ್ತಿರುವವರವರೆಗೆ ಎಲ್ಲರಿಗೂ ಇದು ಚಿಂತನಾರ್ಹವಾಗಿದೆ. ಹಣ ಸಂಪಾದಿಸುವುದು ಕೌಶಲ; ಉಳಿಸುವುದು ಶಿಸ್ತು; ಸೂಕ್ತವಾಗಿ ಹೂಡಿಕೆ ಮಾಡುವುದು ವಿವೇಕ. ಈ ಮೂರೂ ನಮ್ಮ ಬದುಕಿನಲ್ಲಿ ಒಂದಾದಾಗ ಭವಿಷ್ಯಕ್ಕೆ ಭದ್ರವಾದ ಆರ್ಥಿಕ ನೆಲೆ ನಿರ್ಮಿಸಿಕೊಳ್ಳಬಹುದು. ಡಾ. ಜಿ. ಎನ್. ಜಗನ್ನಾಥ್ ಅವರ ಈ ಪುಸ್ತಕ ಓದುಗರಿಗೆ ಹೊಸ ಅರಿವು ನೀಡಿ, ವಿವೇಕಯುತ ಹಣಕಾಸಿನ ನಿರ್ಧಾರಗಳಿಗೆ ಪ್ರೇರಣೆಯಾಗಲಿ ಎಂಬ ಆತ್ಮೀಯ ಆಶಯದೊಂದಿಗೆ

– ಸುನೀಲ್ ಹಳೆಯೂರು

Rating This Book

Reviews

There are no reviews yet.

Be the first to review “ಉಳಿತಾಯ”

Your email address will not be published. Required fields are marked *

Top Books