+918310000414
contact@kannadabookpalace.com
+918310000414
contact@kannadabookpalace.com
Out of stock
₹60.00
Out of stock
Timely Arrival:
5–10 Days
To Your Doorstep
UPI • Cards • Net Banking
100% Safe & Secure
On Orders Above
₹999
ಈಗಾಗಲೇ “ಬದುಕಿನೊಳಗಿನ ಭಾವಗಳು ಮತ್ತು ಹಿಂಡು ಹಕ್ಕಿಗಳ ಹಾಡು” ಎಂಬ ಎರಡು ಸಂಪಾದಿತ ಕೃತಿಗಳನ್ನು ಓದುಗರ ಕೈಗಿಟ್ಟದ್ದು, ಅದೇ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಸೇರುತ್ತಿರುವ “ಅರಳಿ ನಿಂತ ಹೂಗಳು” ಎಂಬ ಸಂಪಾದಿತ ಕವನ ಸಂಕಲನವು ಮೂರನೇ ಸಂಪಾದಿತ ಕೃತಿ ನಾಡಿನ ಯುವ ಬರಹಗಾರರ ಕವಿತೆಗಳನ್ನು ಹೊತ್ತು ತಂದು ನಿಂತಿರುವ ಈ ಕಿರು ಹೊತ್ತಿಗೆಯು ವಿವಿಧ ವಿದ್ಯಮಾನಗಳಿಂದ ಪ್ರಭಾವಿತರಾಗಿ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಯುವ ಸಹಗಾರರ ಕವನಗಳನ್ನು ಕನ್ನಡ ನಾಡಿನ ಸಮಸ್ತ ಓದುಗರಿಗೆ ಪರಿಚಯಿಸಲು ಪಯಣಿಸುತ್ತಿದೆ.
ಕನ್ನಡ ನಾಡಿನ ಸೃಜನಶೀಲ ಯುವ ಬರಹಗಾರರ ಕವಿತೆಗಳು ಈ ಪುಸ್ತಕದಲ್ಲಿ ಸ್ಥಾನ ಪಡೆದಿದ್ದು ಕಾವ್ಯಾಸಕ್ತರನ್ನು ತನ್ನೆಡೆಗೆ ಸೆಳೆದು ಓದಿಸಿಕೊಂಡು ಹೋಗುತ್ತವೆ. ಪ್ರತಿಯೊಂದು ಕವಿತೆಗಳನ್ನು ಓದುತ್ತಾ ಹೋದಂತೆ ಬಗೆ ಬಗೆಯ ಚಿಂತನೆಗಳು ಹುಟ್ಟಿಕೊಳ್ಳುತ್ತಲೇ ಹೋಗುತ್ತವೆ. ಬದುಕಿನಲ್ಲಿನ ಸಂಭ್ರಮ. ತವಕ-ತಲ್ಲಣಗಳು, ನೋವು-ನಲಿವು, ಸುಖ-ದುಃಖ ವಿಷಯಗಳಿಗೆ ಸಂಬಂಧಿಸಿದ ಕವಿತೆಗಳು ಓದುಗರ ಬದುಕಿನಲ್ಲಿನ ಜೀವಂತ ಭಾವನೆಗಳ ಮೇಲೆ ಬೆಳಕು ಚೆಲ್ಲುತ್ತದೆ.
ಈ ಕೃತಿಯಲ್ಲಿನ ಕವಿತೆಗಳ ವಿಷಯ ವಸ್ತುಗಳು ಬೇರೆ ಬೇರೆಯಾಗಿದ್ದರೂ ಕೂಡಾ. ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಓದುಗರನ್ನು ಚಿಂತನೆಗೆ ಹಚ್ಚಿಸುತ್ತವೆ. ಬದುಕಿನಲ್ಲಿನ ಪ್ರೀತಿ, ಪ್ರೇಮ, ವಿರಹ, ತಂದೆ, ತಾಯಿ, ನೋವು, ನಲಿವು, ಸುಖ ದುಃಖ ಹಾಗೂ ಬದುಕಿನ ಆಗು-ಹೋಗುಗಳನ್ನು ಅಕ್ಷರಗಳ ರೂಪದಲ್ಲಿ ಕ್ರೋಢಿಕರಿಸಿ ಅರಳಿ ನಿಂತ ಹೂಗಳು ಎಂಬ ಕೃತಿಯ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ಸೃಜನಾತ್ಮಕ ಕೆಲಸಕ್ಕೆ ಕನ್ನಡ ನಾಡಿನ ಸಮಸ್ತ ಓದುಗ ಬಂಧುಗಳು ಓದಿ ಹರಸಿ ಎದೆಗವುಚಿಕೊಂಡು ಮುದ್ದಾಡುತ್ತೀರಿ ಎಂಬ ಬಲವಾದ ನಂಬಿಕೆಯೊಂದಿಗೆ…
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2026 Kannada Book Palace All Rights Reserved
Reviews
There are no reviews yet.