ಹಿಂಡು ಹಕ್ಕಿಗಳ ಹಾಡು
₹200.00 Original price was: ₹200.00.₹190.00Current price is: ₹190.00.
Author : ಡಾ. ನವೀನಕುಮಾರ್ ತಿಪ್ಪಾ ಮತ್ತು ಹುಸೇನಸಾಬ ವಣಗೇರಿ
PUBLISHERS NAME: ಡಾ. ನವೀನಕುಮಾರ್ ತಿಪ್ಪಾ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಕನ್ನಡ ಸಾರಸ್ವತ ಲೋಕಕ್ಕೆ ಸೇರುತ್ತಿರುವ ಹಿಂಡು ಹಕ್ಕಿಗಳ ಹಾಡು” ಎಂಬ ಸಂಪಾದಿತ ಕವನ ಸಂಕಲನವು ಕನ್ನಡ ಸಾಹಿತ್ಯ ಲೋಕದಲ್ಲಿ ಚಿಗು ರೊಡೆದು ಸಸಿಯಾಗಿ, ಗಿಡವಾಗಿ, ಹೆಮ್ಮರವಾಗಿ ಬೆಳೆದು ನಿಲ್ಲಬೇಕು ಎಂಬ ಕನಸನ್ನು ಹೊತ್ತುಕೊಂಡಿರುವ ಕನ್ನಡ ನಾಡಿನ ಹಿಂಡು ಯುವ ಬರಹಗಾರರ ಕವಿತೆಗಳನ್ನು ಈ ನಾಡಿಗೆ ಪರಿಚಯಿಸುತ್ತಿದೆ.
ಈ ಕೃತಿಯಲ್ಲಿನ ಮೊದಲ ಕವಿತೆಯ ಸಾಲುಗಳಾದ ಹಿಂಡು ಹಕ್ಕಿಗಳು ನಾವು, ಬನ್ನಿ ರೆಕ್ಕೆ ಬಿಚ್ಚಿ ಹಾರೋಣ, ಬೇಧ ಭಾವವನು ಮರೆತು ಬದುಕೊಂದು ಕಟ್ಟೋಣ ಎಂಬ ಸಾಲುಗಳಿಂದ ಈ ಕೃತಿಯ ಶೀರ್ಷಿಕೆ ಹುಟ್ಟಿಕೊಂಡಿದ್ದು, ಕಾವ್ಯಲೋಕದಲ್ಲಿ ಗಟ್ಟಿಯಾಗಿ ಹೆಜ್ಜೆಯೊಂದನ್ನು ಇಡಬೇಕು ಎಂಬ ಸಣ್ಣ ಆಸೆಯೊಂದನ್ನು ಹೊತ್ತಿರುವ ಹಿಂಡು ಕವಿಗಳ ಕವಿತೆಗಳೆಲ್ಲವೂ ಸೇರಿ ಈ ಕೃತಿಯು ರೂಪ ತಾಳಿದೆ. ಈ ಹೊತ್ತಿಗೆಯ ಮೂಲಕ ಯುವ ಬರಹಗಾರರ ಕವಿತೆಗಳೆಲ್ಲವೂ ಹಿಂಡು ಹಕ್ಕಿಗಳ ಹಾಡಾಗಿ ಹಕ್ಕಿಗಳಂತೆ ಸ್ವಚ್ಛಂದವಾಗಿ ರೆಕ್ಕೆ ಬಿಚ್ಚಿ ಹಾರಾಡಲು ಸಾಹಿತ್ಯವೆಂಬ ವಿಶಾಲವಾದ ನಾಗರದೆಡೆಗೆ ಪಯಣಿಸುತ್ತಿದೆ.
ಈ ಕೃತಿಯಲ್ಲಿನ ಕವನಗಳು ಬಹಳಷ್ಟು ಅರ್ಥಪೂರ್ಣವಾಗಿದ್ದು ಓದುಗರನ್ನು ಚಿಂತನೆಗೆ ಹಚ್ಚುವುದರ ಜೊತೆಗೆ ಕಾವ್ಯಾಸಕ್ತರನ್ನು ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಕವಿತೆಗಳನ್ನು ಓದುತ್ತಾ ಹೋದಂತೆ ಬಗೆ ಬಗೆಯ ಚಿಂತನೆಗಳು ಹುಚ್ಛಿಕೊಳ್ಳುತ್ತಲೇ ಹೋಗುತ್ತವೆ. ಈ ಸೃಜನಾತ್ಮಕ ಕೆಲಸಕ್ಕೆ ಕನ್ನಡ ನಾಡಿನ ಸಮಸ್ತ ಓದುಗ ಬಂಧುಗಳು ಪಿಬಿ ಹರಸಿ ಪ್ರೋತ್ಸಾಹಿಸಿ ಎದೆಗವುಚಿಕೊಂಡು ಮುದ್ದಾಡುತ್ತೀರಿ ಎಂಬ ಬಲವಾದ ನಂಬಿಕೆಯೊಂದಿಗೆ ಈ ಕೃತಿಯನ್ನು ನಿಮ್ಮ ಕೈಗಿಡುತ್ತಿದ್ದೇವೆ.




Reviews
There are no reviews yet.