You are currently viewing ಪರಿಮಳ

ಪರಿಮಳ

ಎತ್ತಣಬಿದರು, ಎತ್ತಣ ಹುಣಸೆ ಬೀಜ
ಎತ್ತಣ ಇದ್ದಿಲು, ಎತ್ತಣ ಸುಗಂಧ ದ್ರವ್ಯ
ಎಲ್ಲರೊಡಗೂಡಿ ಒಂದಾಗಿ ಬೆರೆತು
ಎಲ್ಲೆಡೆಗೂ ಪರಿಮಳ ಸೂಸಿ ಎಲ್ಲರಿಗೂ ಬೇಕಾದೆ.

ನಿತ್ಯ ಪೂಜೆ, ಮಂಗಳಾರತಿಗೆ ನೀನು ಬೇಕೇ ಬೇಕು
ಗುಡಿ ಗೋಪುರ ಮಂದಿರ ಮಸೀದೆ ಗುರುದ್ವಾರ ಚರ್ಚಗಳಲ್ಲಿಯೂ ನೀನು ಬೆಳಗಬೇಕು
ಶವಸಂಸ್ಕಾರದಲ್ಲಿಯೂ ನೀನಿರಲೇಬೇಕು.

ಸರ್ವ ಕಾರ್ಯಕೂ ಮಾಡುವರು ನಿನಗೆ ಅಗ್ನಿಸ್ಪರ್ಶವ
ನಗು ಮೊಗದಲ್ಲಿ ಎಲ್ಲವ ಸಹಿಸುತಾ
ಶ್ವೇತ ವರ್ಣದ ಧೂಮ್ರನುಗುಳುತಾ
ನೀ ಸುಟ್ಟು ಹೋದರೂ ಇಲ್ಲದಂತಿರುವೆ.

ಇಲ್ಲ ನಿನ್ನ ರೂಪ ಗುಣ ಆಕಾರ, ಹಮ್ಮು ಬಿಮ್ಮು
ಪಡೆಯಿತು ಧನ್ಯತೆ ನಿನ್ನ ಬದುಕು ಸಾಕಾರ
ನೀನಿಲ್ಲದ್ದಿರೂ ಇರುವುದು ಆ ನಿನ್ನ ಸುಂದರ ಪರಿಮಳ
ಸರ್ವರೊಳಗೊಂದಾಗಿ ಬಯಲಲ್ಲೇ ಬಯಲಾಗಿ ಬಿಡುವೆ.

ಹೆಚ್.ಆರ್. ಬಾಗವಾನ
ಶಿಕ್ಷಕ ಸಾಹಿತಿಗಳು, ಮುದ್ದೇಬಿಹಾಳ.


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.