You are currently viewing ಬಯಲೊಳು ಬಯಲಾದ ಫಕೀರ

ಬಯಲೊಳು ಬಯಲಾದ ಫಕೀರ

ನಾ ಕಂಡ ಜೀವಂತ ದೇವರು
ಬಿಸಿಲು ನಾಡಿನ ಸಿದ್ದೇಶ್ವರ ಶರಣರು
ಜ್ಞಾನಾಮೃತವೆಂಬ ಅಡುಗೆ ಮಾಡಿ
ಎಲ್ಲರಿಗೂ ಉಣ ಪಡಿಸಿದ ಫಕೀರರು

ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಿವರು
ವೇದ ಶಾಸ್ತ್ರ ಪುರಾಣಗಳನ್ನು
ಅರಿದು ಕುಡಿದವರಿವರು
ನಡೆದಾಡುವ ದೇವರೆಂದೇ ಖ್ಯಾತಿ ಪಡೆದವರು

ತಿಕೋಟಾದ ಬಿಜ್ಜರಗಿಯಲ್ಲಿ ಜನಿಸಿದವರು
ಸಿದ್ದಗೊಂಡ ಎಂಬ ಬಾಲ್ಯನಾಮ ಪಡೆದವರು
ಬಾಲ್ಯದಲ್ಲಿ ಜ್ಞಾನಧಾರೆ ಸೂಸಿದವರು
ದಿನಗಳೆದಂತೆ ಜಗತ್ತಿಗೆ ಬೆಳಗು ನೀಡಿದವರು

ಪದವಿ ಪದಕ ಸನ್ಮಾನಗಳಿಂದ ಬಲು ದೂರ ಇವರು
ನಿರಾಡಂಬರದ ಜೀವನ ಪಥದಲ್ಲಿ ಸಾಗಿದವರು
ಕಿಸೆಯೇ ದುಃಖಕ್ಕೆ ಮೂಲವೆಂದು ಅರಿತವರು
ನಗುಮೊಗದ ಶುಭ್ರ ವಸ್ತ್ರಧಾರಿಗಳಿವರು

ಸಮಯವೆಂದರೆ ಸಿದ್ದೇಶ್ವರ ಶರಣರು
ಜ್ಞಾನದ ವಿಶ್ವರೂಪ ಇವರು
ಸಾಧನೆಗೆ ಸ್ಫೂರ್ತಿದಾಯಕ ರಿವರು
ಇವರನ್ನು ಪಡೆದ ನಾವೇ ಧನ್ಯರು

ಕಾಲನ ಕರೆಗೆ ಓಗೊಟ್ಟು ಹೊರಟು ನಿಂತಿಹರು
ಪಂಚ ಭಾಷಾ ಪ್ರವೀಣರಿವರು
ನಾನು ನಾನಲ್ಲ, ನನ್ನದು ಇಲ್ಲಿ ಏನು ಇಲ್ಲ
ಬಯಲು ಬಯಲಾಗಲು ಹೊರಟು ನಿಂತ ಫಕೀರರಿವರು.

ಹೆಚ್.ಆರ್. ಬಾಗವಾನ
ಶಿಕ್ಷಕರು.
ಮುದ್ದೇಬಿಹಾಳ ಜಿಲ್ಲೆ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.