ಸುವರ್ಣ  ಕರ್ನಾಟಕ

ಕನ್ನಡ ರಾಜ್ಯೋತ್ಸವ ವಿಶೇಷ

ಸoಜಯ ಜಿ ಕುರಣೆ

ಕನ್ನಡಮ್ಮನಿಗೆ  ಕರಮುಗಿದು

ಶೀರವ ಬಾಗಿ ಶುಭವ ಕೋರುವಾ

ಕನ್ನಡ ತಾಯಿಯ

ಘೋಷಿಸುವಾ ಬನ್ನಿರಿ

 

ಗಡಿನಾಡಿನ ಕನ್ನಡಮ್ಮನ

ಹೆಮ್ಮೆಯ ಪುತ್ರರು

ಒಂದೇ  ಗೂಡಿನ ಹಕ್ಕಿಯಾಗಿ

ಹರುಷದಿ ಹಾಡೋಣ ಬನ್ನಿರಿ

 

ಗಡಿನಾಡವಿರಲಿ

ಒಳನಾಡ ವಿರಲಿ

ಹೋರನಾಡ ವಿರಲಿ

 

ಜಾತಿ ಬೇದವ ತೋರೆದು

ಗ0ಡು ಹೆಣ್ಣು ಬೇದವ ಮರೆತು

ಕನ್ನಡಮ್ಮನ ಕೀರ್ತಿಯ

ಶಿಖರವ ಮುಟ್ಟೋಣ

 

ನಾಡ ನಡುವಿನ ಗುಡಿಯೊಳಗೆ

ಸಿಡಿದೆಳುವ ಗಡಿ ನಮ್ಮದಾಗಲಿ

ದೋತರ ದಡಿಯಾoಗ

ಖಾತರಿ ಕನ್ನಡ ನಮ್ಮದಾಗಲಿ

 

ಸಾವಿರ ಸಾವಿರ ವರ್ಷಗಳ

ಇತಿಹಾಸ ಹೊಂದಿರುವ

ಸುವರ್ಣ ಕರ್ನಾಟಕದ

ಕೀರ್ತಿ ಪತಾಕೆ ಗಡಿಯಲ್ಲಿ ಹಾರಿಸೋಣ

 

ಭಾರತಾಂಬೆಯ ಮಡಿಲೊಳಗೆ

ಹಾಡಿ ನಲಿಯೋಣ

ಹಾಡಿ ಕುಣಿಯೊಣ

ಗಡಿಯನಾಡಿನ

ದೊತರದ ದಡಿಯ

ಕನ್ಮನಿಗಳು  ನಾವು  ! ಕನ್ಮನಿಗಳು ನಾವು  !

 

ಸoಜಯ ಜಿ ಕುರಣೆ

ಕ್ರಷ್ಣಾಕಿತ್ತೂರ

ತಾ.ಕಾಗವಾಡ

ಜಿ.ಬೆಳಗಾವಿ

ಮೊಬೈಲ್. 9663065992

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.