
ಲೇಖಕರು : Basavaraj Mathapati
ಓ ಗಾಂಧಿ ನೀನಿದಾಗ ಹಾಡಿದ ನಾಂದಿ
ಇನ್ನು ಮುಗಿದಿಲ್ಲ ಸಾಯುವ ಮಂದಿ
ನೀ ಕಟ್ಟಿದ ಕನಸು ಹೋಯಿತು ನಂದಿ
ಉಳಿಯಲಿಲ್ಲ. ಗಾಂಧಿ ನಿನ್ನ ನಾಂದಿ
ಆಶೆಯ ಗೋಪುರ ಕಟ್ಟಿದ ಅಂದು
ರಾಮರಾಜ್ಯವನ್ನು ಮಾಡಬೇಕು ಎಂದು
ಶಾಂತಿಯ ಮಂತ್ರವ ಬಳಸಿದೆ ಅಂದು
ಆದರೂ ಗಾಂಧಿ ಉಳಿಯಲಿಲ್ಲ. ನಿನ್ನ ನಾಂದಿ
ಬಡವರ ಕಣ್ಣೀರು ಅಳಿಸಲು ಬಂದ
ಗುಲಾಮರಾಗಿ ಬಾಳುವದು ಬೇಡಾ ಎಂದೆ
ಅದರಂತೆ ಹಗಲು-ಇರುಳು ನಿಂದೆ
ಆದರೂ ಗಾಂಧಿ ಉಳಿಯಲಿಲ್ಲ ನಿನ್ನ ನಾಂದಿ
ಸ್ವಾತಂತ್ರ್ಯ ಕಹಳೆಯ ಊದಿಸಿದೆ ಅಂದು
ಆ ಋಣವ ತೀರಿಸಿದರು ಈ ಮಂದಿ ಇಂದು
ಓ ಗಾಂಧಿ ನೀನಿದ್ದಾಗ ಹಾಡಿದ ನಾಂದಿ
ಇನ್ನು ಮುಗಿದಿಲ್ಲ ಸಾಯುವ ಮಂದಿ
Basavaraj Mathapati
No products were found for this query.
-
ಹೃದಯ ಸಿಂಹಾಸನದಲ್ಲಿ
ಗಜ಼ಲ್ ಸಂಕಲನ (Ghazal collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.