ಹೊಸ ಕವಿತೆ

ಲೇಖಕರು : ಡಾ.ವೈ.ಎಂ.ಯಾಕೊಳ್ಳಿ

ಬುದ್ಧನೆಂದರೆ…

ಬುದ್ಧನೆಂದರೆ  ನನಗೆ

ಉತ್ತರ ಕಾಣಲಾರದ

ಯಶೋಧೆಯ ತುಂಬಿದ ಕಣ್ಣು

ಕನಸುಗಳಿಲ್ಲದ ಬಾಲ

ರಾಹುಲನ ಅನಾಥ ಪ್ರಜ್ಞೆ

ಬುದ್ದನೆಂದರೆ ನನಗೆ

ತಪದಿಂದೆದ್ದು ಬಂದು

ಜನರ ನಡುವೆ

ನಿಂದು ಕಣ್ಣೊರೆಸಿದ ಕೈ

ಬುದ್ದನೆಂದರೆ ನನಗೆ

ಅಂಗುಲಿಮಾನ ನನ್ನೂ

ಅಪ್ಪಿಕೊಂಡ ಅನೂಹ್ಯ

ಸಾಗರದ ಪ್ರೀತಿ

ಬುದ್ದನೆಂದರೆ ನನಗೆ

ಶಿಷ್ಯರ ತತ್ವಗಳು ಕಟ್ಟಿಕೊಟ್ಟ

ಬೋಧನೆಯಾಚೆಗೆ

ಕಾಣುವ ತಾಯಿಯ ಮನಸು

ಅಂತೆಯೆ ಯಶೋಧೆಯ

ತ್ಯಾಗಕ್ಕೂ.,ರಾಹುಲನ

ಅನಾಥತೆಗೂ ಅರ್ಥ

ದೊರಕಿತ್ತು!

ಡಾ..ವೈ.ಎಂ.ಯಾಕೊಳ್ಳಿ

No products were found for this query.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.