SKU: 19532

ಎಣ್ಣೆ ಗಾಣಗಳು: ಪ್ರಕರಣ ಅಧ್ಯಯನ

₹220.00

ಪ್ರಾಚೀನ ಕರ್ನಾಟಕದ ಎಣ್ಣೆಗಾಣಗಳ ಐತಿಹಾಸಿಕ ಅಧ್ಯಯನ

Book Details
Author : ಡಾ. ಮೇಘನ ಜಿ.
Publisher : ಕದಂಬ ಪ್ರಕಾಶನ
ISBN : 9789395129114

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಪ್ರಾಚೀನ ಕರ್ನಾಟಕದಲ್ಲಿ ಎಣ್ಣೆಗಾಣಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದವು. ಪ್ರಭುತ್ವಕ್ಕೆ ಹೆಚ್ಚು ತೆರಿಗೆಯನ್ನು ನೀಡುತ್ತಿದ್ದ ಉದ್ಯಮವಿದು. ಮತ್ತು ಪ್ರತಿಬೊಬ್ಬರಿಗೂ ಅಗತ್ಯವಿದ್ದ ತೈಲವನ್ನು ಉತ್ಪತ್ತಿ ಮತ್ತು ಸರಬರಾಜು ಮಾಡುವ ಮೂಲಕ ದೊಡ್ಡ ಹಣಕಾಸಿನ ವಿನಿಮಯದ ವೀದ್ಯೋಗಿಕ ಕ್ಷೇತ್ರವಾಗಿತ್ತು. ಈ ಉದ್ಯಮದಾರರನ್ನು ತೈಲಗರು ಅಥವಾ ಗಾಣಿಗರು ಎಂಬಿ ಸಮುದಾಯವನ್ನೇ ಹುಟ್ಟುಹಾಕಿತು. ಪ್ರಾಚೀನ ಕುಲಸುಮುಗಗಳಲ್ಲಿ ಬಹಳ ಪ್ರಮುಖವಾದ ಈ ಕಸುಬುಗಾರರು ಸಮಾಜದಲ್ಲಿ ದಾನ ಧರ್ಮಗಳನ್ನು ಮಾಡುವುದನ್ನು ಶ್ರೀಮಂತವಾಗಿತ್ತು. ಧಾರ್ಮಿಕ ಆಚರಣೆಗಳಿಗೆ, ದೇವಾಲಯದ ಸೇವೆಗಳಿಗೆ ತೈಲವು ಬಹಳ ಪ್ರಧಾನವಾದ ಪಾತ್ರವಹಿಸುತ್ತಿತ್ತು. ದೇವಾಲಯಗಳ ನಿತ್ಯ ನಿರ್ವಹಣೆಗೆ ಎಣ್ಣೆ ಅತ್ಯಗತ್ಯವಾದ ವಸ್ತುವಾಗಿತ್ತು. ಇದಕ್ಕೆ ದೇವಾಲಯದ ದೀಪಗಳ, ಆಚರಣೆಗಳ ಸೇವೆಗಾಗಿ ಎಣ್ಣೆಗಾಣಗಳನ್ನೇ ಹಾಗೂ ಅವುಗಳಿಗೆ ವಿಧಿಸಿದ್ದ ತೆರಿಗೆಗಳನ್ನೇ ಉಡುಗೊರೆಯಾಗಿ ನೀಡಿದ್ದ ನೂಾರು ಉದಾಹರಣೆಗಳು ಶಾಸನಗಳಲ್ಲಿವೆ. ಎಳ್ಳೆಣ್ಣೆ, ಹೂಗೆಣ್ಣೆ, ಒಪೆವಣ್ಣೆ, ಕಡಲೆಣ್ಣೆ, ಸಾಸಿವೆಣ್ಣೆ, ಕುಸುಬೆಣ್ಣೆ, ಹತ್ತಿಎಣ್ಣೆ, ಬೇವಿಎಣ್ಣೆಗೆ ಮುಂತಾದ ಎಣ್ಣೆಗಳು ಬಳಕೆಯಲ್ಲಿದ್ದವು. ಇಂತಹ ನಿತ್ಯ ಬಳಕೆಯ ವಸ್ತುವಾದ ಎಣ್ಣೆಯನ್ನು ಉತ್ಪತ್ತಿಮಾಡುವ ಸಮುದಾಯವು ಪ್ರಬಲವಾದ ಸಮುದಾಯವಾಗಿತ್ತು. ಇಂತಹ ಗಾಣಗಳನ್ನು ಕುರಿತು ಡಾ. ಮೇಘನ ಜಿ. ಅವರು ನಡೆಸಿರುವ ಗಂಭೀರ ಅಧ್ಯಯನವೇ ಪುಸ್ತಕ “ಎಣ್ಣೆ ಗಾಣಗಳು: ಪ್ರಕರಣ ಅಧ್ಯಯನ” ಎಂಬ ಈ ಕೃತಿಯಾಗಿದೆ. ಸಾಹಿತ್ಯ, ಶಾಸನಗಳು, ಜಾನಪದ ಸಾಹಿತ್ಯ ಹೀಗೆ নানা ಆಕರಗಳನ್ನು ಬಳಸಿ ಇಲ್ಲಿ ಅಧ್ಯಯನ ನಡೆಸಿರುವುದು ಈ ಕೃತಿಯ ತೂಕವನ್ನು ಹೆಚ್ಚಿಸಿದೆ. ಸಂಶೋಧಕರಾದ ಡಾ. ಮೇಘನ ಜಿ. ಅವರಿಂದ ಇಂತಹ ಇನ್ನು ಹಲವಾರು ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.

ಪ್ರೊ. ಡಿ.ವಿ.ಪರಮಶಿವಮೂರ್ತಿಕುಲಪತಿಕನ್ನಡ ವಿಶ್ವವಿದ್ಯಾಲಯ, ಹಂಪಿ

Rating This Book

Reviews

There are no reviews yet.

Be the first to review “ಎಣ್ಣೆ ಗಾಣಗಳು: ಪ್ರಕರಣ ಅಧ್ಯಯನ”

Your email address will not be published. Required fields are marked *