ಇವರು ನಡೆದದ್ದೇ ದಾರಿ
₹170.00
ನಿನ್ನೆಗಳನ್ನು ಮಾಡಿದವರು ನಾಳೆಗಳನ್ನು ನೋಡಿದವರು
| Book Details |
|---|
| Author : ಡಾ. ಟಿ. ಆರ್. ಅನಂತರಾಮು |
| Publisher : ಕದಂಬ ಪ್ರಕಾಶನ |
| ISBN : 9789395129572 |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಬದುಕಿಗೆ ಪ್ರೇರಣೆ ಸಿಗುವುದು ವ್ಯಕ್ತಿಯ ಘನ ಗಾಂಭೀರ್ಯ ನಡತೆಯಿಂದಲೋ ಅಥವಾ ಅವರ ಸಾಧನೆಯಿಂದಲೋ? ಬಹುಶಃ ಈ ಎರಡೂ ಹೌದು. ವ್ಯಕ್ತಿತ್ವಕ್ಕೆ ಮೆರುಗು ಕೊಡುವುದು ಸಾಧನೆ. ಸಮಾಜಕ್ಕೆ ಬೇಗ ಕಣ್ಣಿಗೆ ಕಾಣುವುದು ಕೂಡ ಇದೆ. ಕಳೆದ 50 ವರ್ಷಗಳಲ್ಲಿ ಕನ್ನಡ ನಾಡಿನ ಬೇರೆ ಬೇರೆ ಪತ್ರಿಕೆಗಳಿಗೆ ಬರೆದ, ಮುಖ್ಯವಾಗಿ ವಿಜ್ಞಾನ ಕುರಿತೇ ನಾನು ಬರೆದ ಲೇಖನಗಳೇ ಹೆಚ್ಚು. ಪ್ರಾasangಿಕವಾಗಿ ವಿಜ್ಞಾನ ಸಾಧಕರ ಚಿತ್ರಣಗಳನ್ನು ಬರೆಯಬೇಕಾದ ಅನೇಕ ಸಂದರ್ಭಗಳು ನನಗೆ ಒದಗಿವೆ. ಮುಖ್ಯವಾಗಿ ಕನ್ನಡ ನಾಡಿನ ಪತ್ರಿಕೆಗಳು ತಮಗೆ ಅವಶ್ಯಕವೆಂದಾಗ, ವ್ಯಕ್ತಿ ಚಿತ್ರಣಗಳನ್ನು ಬರೆಸಿವೆ. ಹೆಚ್ಚಿನ ಪಾಲು, ವಿಜ್ಞಾನ ಕ್ಷೇತ್ರದ ಕೆಲಸ ಮಾಡಿದವರು. ವಿಜ್ಞಾನ ಸಂವಹನೆಯಲ್ಲಿ ತೊಡಗಿರುವವರನ್ನು ನಾನು ಚಿತ್ರಿಸಿರುವುದೇ ಹೆಚ್ಚು. ತಮ್ಮ ಬದುಕನ್ನು ವಿಜ್ಞಾನಕ್ಕಾಗಿ ಮೀಸಲಿಟ್ಟ ಹಿರಿಯ ತಲೆಮಾರಿನ ಲೇಖಕರನ್ನು ಕುರಿತು ಬರೆಯುವಾಗ ನನ್ನ ಮನಸ್ಸು ಪ್ರಫುಲ್ಲಗೊಂಡಿದೆ; ಸ್ಫೂರ್ತಿಗೊಂಡಿದೆ. ಭಾಷೆಯಲ್ಲಿ ಅವರ ಬದುಕನ್ನು ಕಟ್ಟಿಕೊಡುವಾಗ ಸಂಭ್ರಮಿಸಿದ್ದೇನೆ. ವಿಜ್ಞಾನಕ್ಕಿಂತಲೂ ಒಂದು ಹೆಜ್ಜೆ ಮುಂದೆ ಎನ್ನಬಹುದಾದ್ದು ಆ ಕ್ಷೇತ್ರದ ಸಾಧಕರ ಬಗ್ಗೆ ಸಮಾಜಕ್ಕಿರುವ ವಿಶೇಷ ಕುತೂಹಲ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಕೃತಿಯಲ್ಲಿ ಕೆಲವು ಪ್ರಮುಖರೆಂದು ಅನಿಸDIDರ ಬಗ್ಗೆ ವ್ಯಕ್ತಿ ಚಿತ್ರಣವನ್ನು ರಚಿಸಲು ಪ್ರಯತ್ನಿಸಿದ್ದೇನೆ.
– ಡಾ. ಟಿ. ಆರ್. ಅನಂತರಾಮು


Reviews
There are no reviews yet.