ಜಯವಾಗಲಿ ಕನ್ನಡಾಂಬೆಗೆ
ಕನ್ನಡ ನಾಡ ಸಿರಿ ದೇವಿಗೆ
ಶುಭವಾಗಲಿ ಅಕ್ಷರದುತ್ಸವಕೆ
ರಾಜ್ಯೋದಯದ ನಾಡ ಹಬ್ಬಕೆ
ಮನೆ ಮನಗಳಲಿ ಮೊಳಗಲಿ ಕನ್ನಡದ ಕಹಳೆ
ತುಂಬಿ ಹರಿಯಲಿ ಕನ್ನಡ ಅಕ್ಷರದ ಹೊಳೆ
ಕನ್ನಡವೇ ಕನ್ನಡಿಗರ ಉಸಿರಾಗಲಿ
ಕನ್ನಡಾಭಿಮಾನಿಗಳಿಗೆ ಶುಭವಾಗಲಿ
ಮಲೆನಾಡ ಮಣ್ಣ ಕಂಪಿನಲಿ
ಕರುನಾಡ ಕನ್ನಡ ಪೆರ್ಮರವಾಗಲಿ
ಕನ್ನಡವೇ ಹೃದಯದ ಭಾಷೆಯಾಗಲಿ
ಕನ್ನಡವನ್ನಾಡಿ ಬರೆದು ಕನ್ನಡಿಗರ ಮನ ತಣಿಯಲಿ
ಕನ್ನಡ ನಲ್ನುಡಿ ಚನ್ನುಡಿ ತಾಯ್ನುಡಿ
ಕನ್ನಡವಾಗಲಿ ಕನ್ನಡಿಗರ ಬದುಕಿಗೆ ಮುನ್ನುಡಿ
ಧಮನಿ ಧಮನಿಯಲಿ ಕನ್ನಡ ಝೇಂಕರಿಸಲಿ
ವಿಜ್ರಂಭಿಸಲಿ ಕನ್ನಡ ಕರುನಾಡ ತುಂಬೆಲ್ಲ ಪಸರಿಸಲಿ
ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ