ಅಕ್ಷರಶಃ ಮೂಳೆಗಳ ಹಂದರಕ್ಕೆ ಧೋತಿ ಕನ್ನಡಕ ಹಾಕಿ ಜೀವ ತುಂಬಿದರೆ ಹೇಗಿರುತ್ತದೆಯೋ ಹಾಗಿದ್ದರೂ ಮಹಾತ್ಮ. ಸಿಂಪಿ ರಕ್ತವಿರದ, ಅಹಿಂಸೆಗಾಗಿ ಹೋರಾಡಿದ ದೈವ ಕೊಲೆಯಲ್ಲಿ ಅಂತ್ಯವಾಗಿದ್ದು ಭಾರತದ ದುರಂತವಾಗಿದೆ. ಜಗ ಮೆಚ್ಚಿದ ಈ ಸುಪುತ್ರನ ಉಳಿಸಿಕೊಳ್ಳಲಾಗದು ನಮ್ಮ ದುರಾದೃಷ್ಟವೇ ಸರಿ. 77 ವರ್ಷದ ತುಂಬ ಜೀವನದಲ್ಲಿ ತಮ್ಮ ಬದುಕನ್ನೇ ಸಂವೇದನವಾಗಿಸಿದ ಏಕೈಕ ಸಂತ ನಮ್ಮ ಬಾಪು. ಯಾವ ವಿಷಯದಲ್ಲಿಯೂ ಕೂಡ ಹೊಂದಾಣಿಕೆ ಮಾಡಿಕೊಳ್ಳದ ಕಟ್ಟಿ ವ್ಯಕ್ತಿತ್ವ ಇವರದು. ದೇಶಕ್ಕಾಗಿ ಕುಟುಂಬವನ್ನೇ ಬಲಿ ಕೊಟ್ಟಂತಹ ಮಹಾತ್ಮ ಇವರು.
ಬಾಲ್ಯದ ಎಲ್ಲ ಘಟನೆಗಳು ಇಂದಿನವರಿಗೆ ವಿಚಿತ್ರ ನಂಬಲಾರರು. ಪ್ರಾಮಾಣಿಕತೆ ಸತ್ಯನಿಷ್ಠೆ ಶಾಲಾ ಘಟನೆಗಳು ಸತ್ಯಾಗ್ರಹಗಳು ಇಂದು ಅಪಮೌಲ್ಯಕ್ಕೆ ಗುರಿಯಾಗುತ್ತಿವೆ. ಲಕ್ಷಾಂತರ ಜನರ ಸುಮಾರು ಪೀಳಿಗೆಯವರ ದಾರಿದೀಪವಾಗಿದ್ದ ಗಾಂಧಿ ಯುವ ಪೀಳಿಗೆಗೆ ಏಕೆ ದೂರಾಗಿದ್ದಾನೆ?
ಆವತ್ತು ರೈಲಿನಲ್ಲಿ ವರ್ಣಭೇದಕ್ಕೆ ಒಳಗಾಗಿ ಭಾರತೀಯರ ನೋವನ್ನ ಅರಿತವರು ಅರಿವಿನ ಮಾನವೀಯತೆ ಭಾರತವನ್ನ ಸ್ವತಂತ್ರವನ್ನಾಗಿಸುವ ಕನಸನ್ನ ನನಸಾಗಿಸಿದವರು. ಕೊಳ್ಳುಬಾಕು ಸಂಸ್ಕೃತಿಯಿಂದ ಹೊರಬರಲು ಸರಳ ಜೀವನ ಉನ್ನತ ವಿಚಾರಗಳನ್ನ ತಮ್ಮ ಜೀವನದಿಂದಲೇ ಸಾಬೀತುಪಡಿಸಿದರು .ಆದರೆ ಇಂದಿನ ಜನಾಂಗ ಅದನ್ನು ಕೇವಲ ನಾಟಕೀಯವಾಗಿ ತೆಗೆದುಕೊಳ್ಳುತ್ತಿರುವುದು ದುರಂತವಾಗಿದೆ.
ಪ್ರಕೃತಿ ವಿಕೋಪ ಸಹಜ ಸಾವಿನ ಪ್ರಮಾಣಕ್ಕಿಂತ ಯುದ್ಧ ದ್ವೇಷ ಅಸೂಯದಿಂದ ಮಾನವ ಜನಾಂಗದ ವಿನಾಶವಾಗುತ್ತಿದೆ ಜೀವ ವಿನಾಶದ ಅಂಚಿನಲ್ಲಿ ನಾವು ಬದುಕುತ್ತಿದ್ದೇವೆ. ಮಾನವ ಜನ್ಮ ಸಿಗುವುದೇ ಅಪರೂಪ ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪ ಗಳಿರ ಎಂಬ ದಾಸರ ನುಡಿಯಂತೆ, ಕ್ಷಣಿಕವಾಗುತ್ತಿರುವ ಬದುಕಿಗೆ ಗಾಂಧಿ ಎಲ್ಲ ಎಲ್ಲ ಮಂತ್ರಗಳು ಪ್ರಸ್ತುತವಾಗಿವೆ ಎಂದೆಂದಿಗೂ ಪ್ರಸ್ತುತವಾಗಿವೆ.
ಆಧುನಿಕ ಪೀಳಿಗೆಗೆ ಬಾಪು ಅವರನ್ನು ಪರಿಚಯಿಸಲು ಪರದಾಡುತ್ತಿದ್ದೇವೆ ತಂದೆ ತಾಯಿ ಶಿಕ್ಷಕ ಬಳಗ ಸಮಾಚಾರ ವಿಫಲವಾಗುತ್ತಿದೆ.ಕಾರಣ ಗಾಂಧಿ ಮತ್ತೆ ನಮ್ಮ ನಡುವೆ ದೊಡ್ಡದಾದಂತಹ ಕಂದಕವೇ ಸೃಷ್ಟಿಯಾಗಿದೆ.
ಆತ್ಮೀಯರೇ ಗಾಂಧಿ ಯುಗ ಅಷ್ಟು ಸುಲಭವಾಗಿರಲಿಲ್ಲ.ಸರಳವಾಗಿಯೂ ಇರಲಿಲ್ಲ. ಎಲ್ಲ ವಿಷಯದಲ್ಲೂ ಬೇರೆ ದೇಶದ ಮೇಲೆ ಅವಲಂಬಿತರಾಗಿದ್ದ ನಾವು ಹಳ್ಳಿಹಳ್ಳಿಯಲ್ಲಿ ಜನರನ್ನ ಸಂಘಟಿಸಿ ಸ್ವತಂತ್ರ ಹೋರಾಟಕ್ಕೆ ಸಿದ್ಧಮಾಡಿರುವುದು ಸುಲಭ ಸಾಧ್ಯಕ್ಕೆ ನಿಲುಕದ ಕಾರ್ಯವಾಗಿತ್ತು. ಸಂಘಟನೆಯನ್ನುವುದು ಹೃದಯ ಅಂತರಾಳದಿಂದ ಬರುವಂತಹ ಒಂದು ಪ್ರಕ್ರಿಯೆ ಆ ಕಾರ್ಯಕ್ಕಾಗಿ ಗಾಂಧೀಜಿ ಶ್ರಮ ಪಟ್ಟಿದ್ದಾರೆ ಮಹಾತ್ಮ ವಿಶ್ವದ ಅತ್ಯಂತ ಪರಿಣಾಮ ಬೀರುವ ಮಾದರಿಯ ವ್ಯಕ್ತಿ.
ನಡೆ ನುಡಿ ತತ್ವ ಸಿದ್ಧಾಂತ ಧಾರ್ಮಿಕ ಸವೇತನೆಗಳು ಆಹಾರ ವಿಹಾರ ಸರಳತೆ ವಸ್ತ್ರ ವಿನ್ಯಾಸ ಸ್ವಾವಲಂಬನೆ ಸ್ವಯಂ ಕೆಲಸ ಎಲ್ಲದರಲ್ಲೂ ಮಾದರಿಯಾಗಿದ್ದ ಮಹಾತ್ಮನನ್ನ ನಾವೇಕೆ ಒಪ್ಪಿಕೊಳ್ಳುತ್ತಿಲ್ಲ ಇದು ಲಕ್ಷಾಂತರ ಭಾರತೀಯರ ಯಕ್ಷಪ್ರಶ್ನೆಯಾಗಿದೆ.
ಸ್ವಲ್ಪವೇ ಪ್ರಯತ್ನ ಪಟ್ಟರು ಭಾರತದ ಮೊದಲ ರಾಷ್ಟ್ರಪತಿ ಮೊದಲ ಪ್ರಧಾನ ಮಂತ್ರಿ ಆಗುವ ನೂರಕ್ಕೆ ಎರಡು ನೂರರಷ್ಟು ಸಂಭವವಿತ್ತು. ಆದರೆ ರಾಜಕೀಯ ಅಧಿಕಾರದಿಂದ ದೂರ ಉಳಿದು ಕಲ್ಕತ್ತಾದಂತಹ ನಗರದಲ್ಲಿ ಕಸಗುಡಿಸುವ ಕೆಲಸವನ್ನು ಮಾಡುತ್ತಿರುವ ಮಹಾತ್ಮ ನಮಗೆ ಬೇಡವಾಗಿದ್ದಾನೆ.ಸಿಂಧೂ ನದಿಯಿಂದ ದೂರವಾಗಿ ಹಿಂದುಸ್ತಾನ್ ಮತ್ತು ಪಾಕಿಸ್ತಾನ ಎಂಬ ರಾಷ್ಟ್ರಗಳನ್ನಾಗಿ ವಿಭಾಗ ಮಾಡಿರುವಂಥದ್ದು ಇವತ್ತಿನ ಯುವಜನಾಗಕ್ಕೆ ಅರಗಿಸಿಕೊಳ್ಳಲಾದ ಸತ್ಯ.ಆದರೆ ಅದು ವಾಸ್ತವವಾಗಿತ್ತು 70 ವರ್ಷದ ಹಿಂದೆ ಅದು ಅನಿವಾರ್ಯವೂ ಆಗಿತ್ತು.
ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ, ಬರಾಕ್ ಓಬಾಮ ಇನ್ನು ಹಲವಾರು ಜನರಿಗೆ ಸಂತ ಫಕೀರನಾಗಿ ಕಂಡಂತಹ ಗಾಂಧಿ ನಮಗೆ ಏಕೆ ಬೇಡ?
ಸರ್ವೋದಯ ಶಿಕ್ಷಣ ನೈ ತಾಲಿ ಮಾ ತರಬೇತಿ, ಗುಡಿ ಕೈಗಾರಿಕೆಗಳು ಗ್ರಹ ಕೈಗಾರಿಕೆಗಳು ಪಾರದರ್ಶಕ ಆರ್ಥಿಕ ವ್ಯವಸ್ಥೆ ಸ್ವಾವಲಂಬಿ ಜೀವನ ಇವೆಲ್ಲವೂ ಜಗತ್ತಿನ ಹಲವಾರು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಆದರೆ ಭಾರತವೇ ಈ ಮೂಲಭೂತ ಅಂಶವನ್ನು ಮರೆತಂತಿದೆ ಶಿಕ್ಷಣ ಪದ್ಧತಿಯಲ್ಲಿ ಕೂಡ ಕೌಶಲ್ಯಗಳೆರದೆ ಆರ್ಥಿಕ ವ್ಯವಸ್ಥೆಯು ಕೂಡ ಅವಲಂಬಿತವಾಗಿವೆ.
ಜಗತ್ತಿನ ಸುಮಾರು 92 ದೇಶಗಳು ಗಾಂಧಿಯನ್ನು ಒಪ್ಪಿಕೊಂಡು ಪೂಜಿಸುವಂತಹ ಸಮಯದಲ್ಲಿ ಗಾಂಧಿಯನ್ನ ವಿಮರ್ಶಕ್ಕೆ ತಳ್ಳುತ್ತಿದ್ದೇವೆ. ಮಹಾತ್ಮ ನನ್ನ ಮಾಧ್ಯಮಗಳಲ್ಲಿ ಭಾಷಣಗಳಲ್ಲಿ ಮಕ್ಕಳ ಜೊತೆ ಮಾತನಾಡುವಾಗ ಧನಾತ್ಮಕವಾಗಿ ಮಾತಾಡಿ ಅವರು ಸಂಘಟಿಸಿರುವ ಅವರದೇ ಆದ ಸ್ವಾತಂತ್ರ್ಯ ಸಂಗ್ರಾಮವನ್ನು ಸಂಗ್ರಾಮದ ಚಳುವಳಿಯ ಸ್ವರೂಪವನ್ನು ಮುಟ್ಟಿಸೋಣ.
ಸದೃಢವಾದ ಬೇರಿಲ್ಲದೆ ಸದೃಢವಾದ ಮರನಿಲ್ಲದಂತೆ ವಿಶ್ವದ ವಿಶಿಷ್ಟ ಸಂಸ್ಕೃತಿಯಾದ ಭಾರತದ ಸಂಸ್ಕೃತಿ, ಪರಂಪರೆಯನ್ನು, ಉಳಿಸಿಕೊಳ್ಳುವಲ್ಲಿ ಮಹಾತ್ಮರನ್ನ ಎಂದಿಗೂ ಎಂದೆಂದಿಗೂ ನೆನೆಯುತ್ತಾ ಯುವ ಜನಾಂಗ ಗಾಂಧಿಯನ್ನು ಪ್ರೀತಿಸುವಂತೆ ಪ್ರಾರ್ಥಿಸುತ್ತಾ ಲೇಖನ ಮುಗಿಸುತ್ತೇನೆ.
ಶೀಲಾ ಚಂದ್ರಶೇಖರ್ ಜಾಮದಾರ
ಕನ್ನಡ ಉಪನ್ಯಾಸಕರು ಸ್ಟೇಟ್ ಪದವಿ
ಪೂರ್ವ ಮಹಾವಿದ್ಯಾಲಯ ರಾಮದುರ್ಗ
ಜಿಲ್ಲೆ ಬೆಳಗಾವಿ.ಫೋನ್ ಸಂಖ್ಯೆ 9113879337