You are currently viewing ವ್ಯಕ್ತಿಯಲ್ಲ ಅವನೊಬ್ಬ ಅದ್ಭುತ ಶಕ್ತಿ

ವ್ಯಕ್ತಿಯಲ್ಲ ಅವನೊಬ್ಬ ಅದ್ಭುತ ಶಕ್ತಿ

//ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ ಆರುಹ್ಯ ಕವಿತಾ ಶಾಖಾಂ ಒಂದೇ ವಾಲ್ಮೀಕಿ ಕೋಕಿಲಂ //

ಬುಧ ಕೌಶಿಕ ಋಷಿಯು ಶ್ರೀರಾಮರಕ್ಷಾ ಸ್ತೋತ್ರದ ಮೂವನಾಲ್ಕನೇ ಶ್ಲೋಕದಲ್ಲಿ ಮಧುರಾಕ್ಷರದಿಂದ ಸುಮಧುರವಾಗಿ ರಾಮ ನಾಮವನ್ನು ಕೂಗಿದ ಈ ಕೋಗಿಲೆಯನ್ನು ತುಂಬಾ ಅದ್ಭುತವಾಗಿ ವರ್ಣಿಸಿದ್ದಾರೆ.
ಆ ಕೋಗಿಲೆ ಯಾರು ಗೊತ್ತಾ?

ಅಶ್ವಿಜ ಮಾಸದ ಪೂರ್ಣಿಮೆಯ ದಿನದಂದು ಗಂಗಾ ನದಿಯ ತಟದಲ್ಲಿ ಕಶ್ಯಪ ಮತ್ತು ಅದಿತಿ ಋಷಿಗಳ ಮಗನಾದ ಪ್ರಚೇತ ಋಷಿಗಳಿಗೆ ರತ್ನಾಕರ ಎಂಬ ನಾಮ ದೆಯವುಳ್ಳ ಸುಪುತ್ರನ ಜನನವಾಯಿತು ಆ ರತ್ನಾಕರವೆಂಬ ವ್ಯಕ್ತಿ ಮುಂದೊಂದು ದಿನ ವಾಲ್ಮೀಕಿ ಎಂಬ ಶಕ್ತಿಯಾಗಿ ಪರಿವರ್ತನೆಯಾದನು.

ಹುಟ್ಟುತ ಹುಲ್ಲಾಗು ಬೆಳೆಯುತ್ತಾ ಮನೆಗೆ ಮಲ್ಲಿಗೆಯಾಗು ಎಂಬಂತೆ ಶಿಸ್ತು ಸಂಸ್ಕಾರವಂತರ ಮನೆಯಲ್ಲೇ ಹುಟ್ಟಿದರು ಕೂಡ ಕಾಲಚಕ್ರದ ಕೈಗೆ ಸಿಕ್ಕು ಅವನ ಬಾಲ್ಯ ಕಳ್ಳ ದರೋಡೆಕೋರನಾಗಿ ಮಾಡಿತು.

ಕಳ್ಳನಾಗಿ ಕಾಡುಮೇಡು ಅಲೆಯುತ್ತಿರುವಾಗ ನಾರದ ಮುನಿಗಳ ಮಾರ್ಗದರ್ಶನದ ಮೇರೆಗೆ ರಾಮ ನಾಮ ಉಚ್ಚಾರಣೆಯಿಂದ ಅವನ ಜೀವನದ ಮೌಲ್ಯ ಹೆಚ್ಚಿಸುವದಲ್ಲದೆ ತಾನು ಮಾಡಿದ ಪಾಪಕರ್ಮಗಳಲ್ಲಿ ಮಡದಿ ಮಕ್ಕಳು, ಪಾಲುಕೊಳ್ಳುವುದಿಲ್ಲವೆಂಬುವ ಸತ್ಯ ಅರಿವಾಯಿತು ನದಿಯ ತಟದಲ್ಲಿ ತಾನು ಹತ್ಯೆಗೈದ ಕ್ರೌಂಚ ಪಕ್ಷಿಯ ಸಾವು ಅವನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು ಸತ್ತಿರುವ ಪಕ್ಷಿಯನ್ನು ಬದುಕಿಸುವ ಸಾಮರ್ಥ್ಯ ನನ್ನಲ್ಲಿಲ್ಲ ಅಂದಮೇಲೆ ಕೊಲ್ಲುವ ಹಕ್ಕು ನನಗಿಲ್ಲ ಎನ್ನುವ ಅಂಧಕಾರದಿಂದ ಹೊರಬಂದು. ಸ್ಲೋಕವನ್ನು ಬರೆಯಲು ಶುರು ಮಾಡಿದ…




ಅಗ್ನಿ ಶರ್ಮ ಆದಿಕವಿ ರಸ ಋಷಿ ಹುತ್ತದಿಂದ ಪುನರ್ಜನ್ಮ ಪಡೆದಿದ್ದಕ್ಕಾಗಿ ವಾಲ್ಮೀಕಿ ಋಷಿ ಎಂಬ ಹೆಸರಿನಿಂದ ಜಗತ್ಪ್ರಸಿದ್ಧಿಯಾದರು.

ಹತ್ತು ಧಾರ್ಮಿಕ ಗ್ರಂಥಗಳಲ್ಲಿ ವಾಲ್ಮೀಕಿ ರಾಮಾಯಣ ಅತ್ಯಂತ ಶ್ರೇಷ್ಠ ಗ್ರಂಥವಾಗಿದೆ ಅದಕ್ಕಿಂತ ಮಿಗಿಲೆಂದರೆ ಸ್ವಾಮಿ ವಿವೇಕಾನಂದ ಅವರು ಸರ್ವ ಧರ್ಮ ಸಮ್ಮೇಳನಕ್ಕೆ ಚಿಕಾಗೋ ನಗರಕ್ಕೆ ಹೋದಾಗ ನಮ್ಮ ಭಾರತ ದೇಶದ ಅತ್ಯಂತ ಶ್ರೇಷ್ಠ ಗ್ರಂಥಮಾಲೆಯಾದ ಭಗವದ್ಗೀತೆಯ ಜೊತೆಗೆ ಶ್ರೀ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಕೂಡ ಆಧ್ಯಾತ್ಮ ಮತ್ತು ಧಾರ್ಮಿಕತೆಯ ಮುಕುಟಮಣಿಯಂತೆ ಅತ್ಯಂತ ಉನ್ನತ ಸ್ಥಾನವನ್ನು ಪಡೆದುಕೊಂಡಿವೆ.

ಕಳ್ಳನಾದ ವಾಲ್ಮೀಕಿ ಶ್ರೀ ರಾಮನ ಚರಿತ್ರೆಯನ್ನು ನಾರದ ಮುಖದಿಂದ ಆಲಿಸಿ ರಾಮಾಯಣವನ್ನು ರಚಿಸಿದ್ದಲ್ಲದೆ ಸೀತಾದೇವಿಯ ಮಕ್ಕಳಾದ ಲವಕುಶರನ್ನು ಪಾಲನೆ ಪೋಷಣೆ ಮಾಡುವುದಲ್ಲದೆ ಉತ್ತಮ ಶಿಷ್ಯರನ್ನಾಗಿ ಮಾಡುವ ಮೂಲಕ ರಾಮಾಯಣದ ಪ್ರಚಾರ ಮಾಡಿಸಿದರು ಲವಕುಶರಿಂದ ಹಾಡಿನ ಮೂಲಕ ಹಾಡುತ್ತ ಒಂದು ದಿನ ರಾಮ ರಾಜ್ಯಕ್ಕೆ ಹೋದಾಗ ರಾಮಚಂದ್ರರು ಕೇಳಿದರಂತೆ ನೀವು ಯಾರ ಮಕ್ಕಳು ನಿಮಗೆ ರಾಮನ ಚರಿತ್ರೆಯನ್ನು ಯಾರು ಹೇಳಿದರು ಎಂದು ಆಗ ಬಾಲಕರು ಹೇಳಿದರಂತೆ ಪಿತೃ ಪರಿಪಾಲಕ ಏಕ ಪತ್ನಿವ್ರತಸ್ತ ರಾಜ್ಯಶ್ರೇಷ್ಠ ಶ್ರೀರಾಮಚಂದ್ರರ ಚರಿತೆ ವಾಲ್ಮೀಕಿ ರಷ್ಯಸ್ಕೃಂಗರು ಮತ್ತು ನಮ್ಮ ಗುರುಗಳು ಹೇಳಿದರು ಎಂದರಂತೆ.

ವಾಲ್ಮೀಕಿ ಋಷಿಗಳ ಜೀವನ ಚರಿತ್ರೆಯು ಇಂದಿನ ಯುವ ಪಿಳಿಗೆಗಳಿಗೆ ಒಂದು ಉತ್ತಮವಾದ ಆದರ್ಶಮಯ ಬದುಕನ್ನು ಕಟ್ಟಿಕೊಳ್ಳುವ ಅತ್ಯದ್ಭುತ ನಿದರ್ಶನವಾಗಿದೆ.
ಉತ್ತಮನಾಗಿ ಬದುಕು ಕಟ್ಟಿಕೊಳ್ಳಬೇಕೆಂದರೆ ಉತ್ತಮ ಜಾತಿ ಮತದಿಂದಲೇ ಬರಬೇಕು ಅಂತೇನಿಲ್ಲ ಮತದಿಂದ ಕಿಳರಾದರೂ ಸಾಧನೆಯಲ್ಲಿ ಹಿರಿಯರಾಗಬೇಕು ಹಿಂದೆ ಅದೆಷ್ಟೋ ಜನ ಅಸ್ಪೃಶ್ಯ ಜಾತಿಯಲ್ಲಿ ಜನಿಸಿದವರು ಶಿವಭಕ್ತರೆನಿಸಿಕೊಂಡು ಸಾತ್ವಿಕ ಜೀವನವನ್ನು ನಡೆಸಿ ಮಹಾತ್ಮರು ಶರಣರು ಜಂಗಮರೆನಿಸಿದರು. ಮತ್ಸ್ಯಗಂಧಿಯಲ್ಲಿ ಜನಿಸಿದ ವ್ಯಾಸರು ಮಹಾಭಾರತ ಬರೆದರು. ಚಂಡಾಲಕನ್ಯಯಾದ ಮಾತಂಗಿಯ ಮಗ ಮೃಖಂಡು ಮಹರ್ಷಿಯ ಪುತ್ರ ಮಹಾಶಿವ ಭಕ್ತ ಮಾರ್ಕಂಡೇಯನಾದ. ಕಪ್ಪೆಯ ಮಗಳು ಮಂಡೋದರಿ ರಾವಣಾಸುರನ ಮಡದಿಯಾದಳು.
ಹೀಗೆ ಈ ಧರೆಗೆ ಜನ್ಮವೇತ್ತಿ ಬಂದ ಪ್ರತಿಯೊಬ್ಬ ಮಾನವನು ಮಹಾ ಮಾನವತಾವಾದಿಯಾಗಿ ಬಾಳಿ ಬದುಕಬೇಕು.

ಸತ್ಯ ಎಂಬುವುದು ಸೋಲುತ್ತದೆ ಹೊರತು ಸಾಯುವುದಿಲ್ಲ ಗೆಲುವು ಎಂಬುದು ಜಯಗಳಿಸುತ್ತದೆ ಹೊರತು ಅಜರಾಮರವಾಗಿಲ್ಲ. ಕೊನೆಗೂ ಗೆಲ್ಲುವುದು ಸತ್ಯ ನಿಷ್ಠೆ ಕಾಯಕ ಧರ್ಮದ ಮಾರ್ಗ ಎಂಬುವದು ಋಷಿ ಮುನಿಗಳು ಇಲ್ಲಿ ಸಾಬೀತುಪಡಿಸಿದ್ದಾರೆ. ಅವರು ರಾಮಾಯಣದಲ್ಲಿ ಬರೆದಿರುವ ಒಂದಿಷ್ಟು ಸಾಲುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು ನಾವು ನೀವೆಲ್ಲರೂ ವಾಲ್ಮೀಕಿಗಳಾದಂತೆಯೇ ಸರಿ ವಾಲ್ಮೀಕಿ ಋಷಿಗಳು ಬೇರೆ ಎಲ್ಲಿಯೂ ಇಲ್ಲ ನಮ್ಮ ನಿಮ್ಮೆಲ್ಲರ ಅಂತರಾತ್ಮದಲ್ಲಿ ತಪ್ಪು ಮಾಡುವುದು ಸಹಜ ಅದನ್ನು ತಿದ್ದಿಕೊಂಡು ಹೋಗುವನೆ ಮನುಜ* ಎಂಬ ಪರಿವರ್ತನೆಯ ಬದುಕಿನಲ್ಲಿ ಇಂದಿಗೂ ಜೀವಂತವಾಗಿದ್ದಾರೆ.🙏

ಶಿವಲೀಲಾ ಎಸ್ ಧನ್ನಾ ಜವಳಿ (ಡಿ)
8867589540