ಸಹನೆಮೂರ್ತಿ ಶಾಂತಿದೂತ
ಹಿಂಸೆಯನ್ನು ತ್ಯಜಿಸಿದ
ಸತ್ಯವನ್ನು ಪಸರಿಸಿದ
ಭಾವ ಹೃದಯೀ ನಮ್ಮ ಬಾಪೂಜಿ
ಸತ್ಯ ಶಾಂತಿ ಬೀಜಗಳು
ಪುಸ್ತಕಕ್ಕೆ ಬಿತ್ತಿಸಿದ
ಅಕ್ಷರಕ್ಕೆ ಸೀಮಿತಾದವು
ಹಾಳೆಗಳ ಹೆಮ್ಮರಾದವು
ತ್ಯಾಗಮಯಿ ಪುಣ್ಯಕೋಟಿ
ನಿಮ್ಮ ಬದುಕು ಸಾರದಲ್ಲಿದೇ
ಈ ಭೂಮಿ ನಮ್ಮ ಬದುಕು
ನಿಮ್ಮ ನೆನಪ ಆಗರಾಗಿದೆ
ಸಾಗಿ ಬಂದ ನಿಮ್ಮ ಬದುಕು
ರಕ್ತಪಾತ ಹೊಳೆಗಳಲ್ಲೂ
ಸತ್ಯಶಾಂತಿ ಯುದ್ಧಕಾಂಡ
ಇತಿಹಾಸ ಪುಟಗಳಲ್ಲಿ ಗರಿಬಿಚ್ಚಿವೇ
ಪುಣ್ಯಭೂಮಿ ಭರತದಲಿ
ನಿಮ್ಮಕಂಡ ನಮ್ಮ ಬದುಕು ಪಾವನಾಗಿದೆ
ರಾಮರಾಜ್ಯ ನಿಮ್ಮ ಕನಸು
ನಮ್ಮ ಬದುಕು ತಲೆ ಎತ್ತಿದೇ .
ಸತ್ಯ ಶಾಂತಿ ತ್ಯಾಗ ಮೂರ್ತಿ
ನಮ್ಮ ಮಹಾತ್ಮಾ ಜಿ….
ರೂಪಾ ಎಂ
ಸಂಡೂರು