ದೇವಿ ದೇವಿ ಎಲ್ಲಮ್ಮ
ಏಳುಕೊಳ್ಳದ ಎಲ್ಲಮ್ಮ
ದೇವಿ ದೇವಿ ಎಲ್ಲಮ್ಮ
ಏಳುಕೊಳ್ಳದ ಎಲ್ಲಮ್ಮ
ರೇಣುಕಾ ರಾಜನ ಯಾಗಕೊಲಿದು
ಅಗ್ನಿಯಿಂದಲೇ ಕಮಲ ರೂಪದಿ
ಕಾಳಿಸ್ವರೂಪಳಾಗಿ /ಜನಿಸಿದೆ
ನೀನು ಜಗದಂಬಾ
ಜಮದಗ್ನಿ ಮುನಿಯ ಸತಿಯಾಗಿ
ಪಂಚರತ್ನಗಳ ಮಾತೆಯಾಗಿ
ಏಳುಕೊಳ್ಳದಲಿ ನೆಲೆಸಿರುವೆ
ಎಲ್ಲಮ್ಮಳಾಗಿ ನೀ ಅಮ್ಮ
ಮಕ್ಕಳಿಲ್ಲದ ಸತಿಯರಿಗೆ
ಜೋಗುಳಬಾವಿಯಲಿ ಮಿಂದು
ಜೋಗುಳ ತೂಗುವ ಹರಕೆಯಲಿ
ಕಂದನ ನೀಡುವೆ ನೀ ಜಗದಂಬಾ
ಜೋಗಮ್ಮ ಮಾತಂಗಿ ಮಾತೆಯರು
ನಿನ್ನ ಪ್ರತಿರೂಪವಾಗಿಹರಮ್ಮ
ಪಡಲಕ್ಕಿ ತುಂಬಲು ಭಕುತಿಯಲಿ
ಹರಸುವರು ಭಕುತರನಮ್ಮ
ಸಪ್ತಮಾತೃಕೆಯರಲಿ ಒಬ್ಬಳಾಗಿರುವೆ
ಏಳುಮಕ್ಕಳ ತಾಯಿ ನೀನಾಗಿರುವೆ
ಸತ್ಯದೇವಿಯಾಗಿ ಭುವಿಯಲಿ ನೆಲೆಸಿರುವೆ
ಮಕ್ಕಳ ಕಾಯುವ ತಾಯಾಗಿರುವೆ
ಸಿಸಿ ಖಾದ್ಮಗಳ ಪ್ರಿಯೆ ನೀನಮ್ಮ
ಬೇವಿನುಡುಗೆ ನೀಡಿ ಭಂಡಾರ ನೀಡಿದೆಯಮ್ಮ
ಚೌಡಿಕೆ ತಾಳ ನಾದ ಪದಕೆ
ನರರಿಗೆ ಒಲಿವೆ ನೀ ಜಗದಂಬಾ
ರೇಣುಕಾ ಎಲ್ಲಮ್ಮ ನಿನ್ನ ಪಾದಕೆ
ಉಧೋ ಉಧೋ
ಆಶಾ ಎಲ್ ಎಸ್
ಶಿವಮೊಗ್ಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.