You are currently viewing ನಮ್ಮ ಸಂವಿಧಾನ

ನಮ್ಮ ಸಂವಿಧಾನ

ಪಾರತಂತ್ರ್ಯ ಮುಕ್ತಗೊಂಡು ಭರತ ಖಂಡ ಸ್ವತಂತ್ರವಾಯಿತು
ಅಂಬೇಡ್ಕರರಿಂದ ಸಂವಿಧಾನ ರಚಿತವಾಯಿತು
ವಿಶ್ವದಲ್ಲಿ ಅತಿ ಉದ್ದದ ಲಿಖಿತ ಸಂವಿಧಾನ ಎನಿಸಿಕೊಂಡಿತು
ಜನವರಿ 26 ಗಣರಾಜ್ಯೋತ್ಸವವಾಗಿ ಉದಯಿಸಿತು

ಸರ್ಕಾರದ ಮೂಲ ರಚನೆಯ ನಿರ್ದಿಷ್ಟತೆ
ಸಾರುತಿಹುದು ವಿವಿಧತೆಯಲ್ಲಿ ಏಕತೆ ನಾಗರಿಕರಿಗೆ
ಒದಗಿಸಿಹುದು ಸಾಮಾಜಿಕ ಆರ್ಥಿಕ ರಾಜಕೀಯ ನ್ಯಾಯ
ವಿಚಾರ ಅಭಿವ್ಯಕ್ತಿ ನಂಬಿಕೆ ಭಕ್ತಿ ಆರಾಧನೆಗಳಲ್ಲಿ ಸ್ವಾತಂತ್ರ್ಯ

ಭ್ರಾತೃತ್ವ ಭಾವನೆ ಬೆಳೆಸಿ ಹಕ್ಕು ಕರ್ತವ್ಯಗಳಿಗೆ
ಚ್ಯುತಿ ಬಾರದೆಂದು ತಿಳಿಸಿ ಸರ್ವೋದ್ಧಾರಕ್ಕೆ
ಸಮಾಜವನು ಪುನಶ್ಚೇತನಗೊಳಿಸಿ
ಸಾಮಾಜಿಕ ಅಸಮಾನತೆ ಕೊನೆಗೊಳಿಸಿ……

ಸಮಾನತೆ ವೈಯಕ್ತಿಕ ಘನತೆ ಕಾಪಾಡಲಿ
ದೇಶದ ಸಮಗ್ರತೆ ಐಕ್ಯತೆ 467ವಿಧಿ 25 ಭಾಗ 12
ಅನುಚ್ಚೇದ 118 ತಿದ್ದುಪಡಿ ಇದುವೇ ಉತ್ತಮ
ಕಾರ್ಯ ನಿರ್ವಹಣೆಗೆ ಬರೆದಿದೆ ಮುನ್ನುಡಿ

ಉಷಾ ಪ್ರಶಾಂತ್
ಸಿದ್ದಾಪುರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.