You are currently viewing ಚಂದ್ರಯಾನ -೩

ಚಂದ್ರಯಾನ -೩

ಭುವಿಯ ಕಕ್ಷೆ ಮೀರಿ ನಭದಿ ಚಿಮ್ಮಿ
ಹಾರುತಿದೆ ನೋಡು ಚಂದ್ರಯಾನ
ಚಂದಿರನ ಅಂಗಳದಿ ಧುಮುಕಿತಮ್ಮಿ
ಮಾಡಲೆಂದು ಭಾರಿ ಸಂಶೋಧನ

ವಿಜ್ಞಾನಿಗಳ ಸತತ ಶ್ರಮದ ಕಾರಣ
ನನಸು ಗಗನನೌಕೆ ಉಡ್ಡಯನ
ಅಂತರಿಕ್ಷದಲ್ಲಿ ನಮ್ಮ ಸಾಧನ
ಹೆಚ್ಚಿಸುತಿದೆ ಭಾರತದ ಸಮ್ಮಾನ

ಚಂದ್ರ ದೂರವೆಂಬ ಭ್ರಮೆಯ ಮುರಿದು
ಭುವಿಗೆ ಬಲು ಸನಿಹವೆಂದು ಬಗೆದು
ಸಾಲು ಸಾಲು ಗಗನನೌಕೆ ಕಳಿಸಿದರು
ಬಾಹ್ಯಾಕಾಶದಲ್ಲಿ ಯಶವ ಗಳಿಸಿದರು

ಗೆಲುವು ಸಾಧಿಸಲಿ ನಮ್ಮ ಚಂದ್ರಯಾನ
ಹಲವು ವಿಷಯ ಅರಿತು ಪಡೆಯಲಿ ಮಾನ
ವಿಶ್ವದಲ್ಲಿ ಎತ್ತಿ ಹಿಡಿದು ನಮ್ಮ ಬುದ್ಧಿಶಕ್ತಿ
ಬೆಳೆಸಲಿ ನವ ಭಾರತದ ಯುವ ಇಚ್ಛಾಶಕ್ತಿ

ಶ್ರೀಮತಿ ದೀಪಾಲಿ ಸಾಮಂತ
ದಾಂಡೇಲಿ, ಉತ್ತರ ಕನ್ನಡ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.