
ಲೇಖಕರು : ಶಂಕರಗೌಡ ಸಾತ್ಮಾರ
ಪರ-ವಿರೋಧಿ ರಾಜಕಾರಣಿಗಳ
ರಾಜಕೀಯ ಡೊಂಬರಾಟಗಳ ನಡುವೆ
ಮನುಷ್ಯ ಕಳೆದು ಹೊಗಿದ್ದಾನೆ
ಉಧ್ಯಮಿ-ವಾಣಿಜ್ಯೋಧ್ಯಮಿಗಳ
ವ್ಯಾಪಾರ-ವಹಿವಾಟುಗಳ ನಡುವೆ
ಮನುಷ್ಯತ್ವ ಕಳೆದು ಹೋಗಿದೆ
ಧರ್ಮ ದೇವರು ಜಾತಿಗಳ
ಮೊಸಳೆ ಹಿಡಿತಳ ನಡುವೆ
ಮಾನವೀಯತೆ ಕಳೆದು ಹೋಗಿದೆ
ಜಗದ್ಗುರು-ಮಠಾಧೀಶರುಗಳ
ಶ್ರೇಷ್ಠತೆಯ ಮೇಲಾಟಗಳ ನಡುವೆ
ಮಾನವ ಪ್ರೀತಿ ಕಳೆದು ಹೋಗಿದೆ
ಮಳೆ-ಬೆಳೆಗಳ ಧವಸ-ಧಾನ್ಯಗಳ
ನಿರೀಕ್ಷೆಯ ಕನಸುಗಳ ನಡುವೆ
ಮನುಷ್ಯನ ಜೀವ ಕಳೆದು ಹೋಗಿದೆ.
ಶಂಕರಗೌಡ ಸಾತ್ಮಾರ
# 52, ಡಾ|| ರಾಧಾಕೃಷ್ಣನ್ ನಗರ,
ಗೋಕುಲ ರೋಡ, ಹುಬ್ಬಳ್ಳಿ 580030
No products were found for this query.
-
ಹೃದಯ ಸಿಂಹಾಸನದಲ್ಲಿ
ಗಜ಼ಲ್ ಸಂಕಲನ (Ghazal collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.