ಕಾಗೆ ರಾಜ

ಒಂದಗಳ ಅನ್ನ ಕಂಡರೂ
ನಿನ್ನವರ ಕರೆದು ಎಲ್ಲರ
ಜೊತೆಗೂಡಿ ನೀ , ತಿನ್ನುವೆ |

ನಿಮ್ಮಲ್ಲಿ ಯಾರಿಗಾದರೂ
ಅನಾಹುತವಾದರೆ ಎಲ್ಲರ
ಸೇರಿಸಿ , ಒಟ್ಟಾಗಿ ಜೋರಾಗಿ
ದೊಡ್ಡ ರೋದನವ ಮಾಡುವೆ |

ಒಂಟಿ ಜೀವನ ನಿನದಲ್ಲ
ಸ್ವಾರ್ಥ – ಕಪಟ ಕಾಣಲಿಲ್ಲ
ಸಮಾನತೆ – ಸಹಬಾಳ್ವೆಯ
ಬದುಕು ನಿಮ್ಮಲ್ಲಿ ತುಂಬಿದೆಯಲ್ಲ !

ಕೋಗಿಲೆ ಕಂಠ ಇರದಿದ್ರೇನು
ಚಂದದ ಬಣ್ಣ ಇಲ್ಲವಾದ್ರೇನು
ನಿನ್ನ ಬಾಯಿಂದ ಬರುವ
ಕಾ…ಕಾ…ಕಾ… ಉಚ್ಚಾರಣೆ
ನೆನಪು ಮಾಡಿಸುವುದಲ್ಲ
ಕರುನಾಡು ಕನ್ನಡದ ಅಕ್ಷರಮಾಲೆ !!

ಅದೆಷ್ಟೋ ಜನ
ಕನ್ನಡದ ನೆಲ ಜಲದ ಉಪ್ಪುಂಡು
ಕನ್ನಡವ ಮರೆತಿರುವುದುಂಟು
ಕಾಗೆರಾಜ , ನಿನ್ನ ನೋಡಿ ನಾವೆಲ್ಲ
ಕಲಿಯುವುದು ಬಹಳ ಬಹಳ ಉಂಟು |

ಎಚ್.ಕೆ. ಕೊಟ್ರಪ್ಪ
ಹರಿಹರ