ಯಾರಿಗೆ ಯಾವಗ ವಾರ್ನಿಂಗ್ ತಿಳಿದಿಲ್ಲ
ಕಷ್ಟದಲ್ಲಿ ಆ ಎರಡು ದೇಶಗಳು ಅಲ್ಲಿ
ಸುತ್ತಲಿನ ದೇಶಗಳಿಗೆ ತಟ್ಟಲಿದೆ ಯುದ್ಧವು
ಗುಂಡಿನ ಸುರಿಮಳೆ ನೋಡಿ ಭಯವು
ಬುದ್ಧಿಇಲ್ಲದದೇಶ ಮಾರಣಹೋಮದಲ್ಲಿ
ಸಹಕಾರ ಸಹಮತ ಇರಲಿಲ್ಲ ನಾಯಕರಲ್ಲಿ
ಜಾತಿಯ ಮತ ಧರ್ಮದ ಕರ್ಮಕಾಂಡವು
ರಾರಾಜಿಸಿ ಸುಟ್ಟಿತು ಇಡೀ ದೇಶವು ಯದ್ಧವು
ಶಾಂತಿ ವಿಶ್ವಾಸ ಮೂಡಲಿ ನಾಯಕರಲ್ಲಿ
ಕಣ್ಣೀರಿನ ಕಥೆ ಜನರಲ್ಲಿನ ವ್ಯಥೆವು ಕಣ್ಣಲ್ಲಿ
ಕಷ್ಟದ ದಿನಗಳು ಕಳೆಯಲಿ ಆ ದೇಶದಲ್ಲಿ
ಒಂದಾಗಿ ಒಗ್ಗಟ್ಟಿನ ಬಲವು ತೋರಿಸಿಲ್ಲಿ
ಗುಡುಗು ಮಿಂಚಿನ ಶಬ್ದವು ಕೇಳಲಿ
ಯುದ್ಧ ನಿಲ್ಲಲಿ ಬುದ್ಧಿ ಬೆಳೆದು ನಿಲಲಿ
ನಿಮ್ಮ ನಿಮ್ಮಯ ದುಃಖವು ಮರೆಸಲಿ
ರಕ್ತದ ಹರಿವು ನಿಲ್ಲಿಸಿ ಜೀವ ಉಳಿಯಲಿ
ಮಹಾಂತೇಶ ಖೈನೂರ