ಭಾಷೆ ನೀಡಿ ಭರವಸೆ ಬೆಸೆಯುವರೇನಯ್ಯ…?
ಕೈ ಮೇಲೆ ಕೈ ಹಾಕಿ ಕರವ ಸಡಿಲಿಸಿ ಹೊರಡುವರಯ್ಯ…!
ಮಾತು ಕೊಡುವ ಮುನ್ನ
ಯೋಚನೆ ಮಾಡುವರೇನಯ್ಯ…?
ಹೊತ್ತು ಮುಳುಗಿದ ಮೇಲೆ
ಸುತ್ತೆಲ್ಲವೂ ಕತ್ತಲುಮಯವಯ್ಯ..
ಅರಿತು ಸಾಗಿದೊಡೆ ಮನಕೆ
ವಚನದ ಸಾರ ತಿಳಿವುದಯ್ಯ..!
ವಚನ ಭ್ರಷ್ಟರಾಗಬೇಡಿರಯ್ಯ
ದ್ವೀ ಜನ್ಮವೆಂಬುದು ಇಲ್ಲವಯ್ಯ
ಬಾಯಿ ತಪ್ಪಿ ನಡೆಯಬೇಡಿರಯ್ಯ
ಭವ ನರಕ ಪ್ರಾಪ್ತವಾಗುವುದು ಖಚಿತವಯ್ಯ….!
ಸವಿಗನ್ನಡತಿ
ಸವಿತಾ ದೇಶಪಾಂಡೆ
ತಾವರಗೇರಾ..