You are currently viewing ಯುಗಾದಿ

ಯುಗಾದಿ

ಮತ್ತೆ ಯುಗಾದಿ ಬಂತು..
ಎಲ್ಲರ ಬಾಳಲ್ಲಿ ಹೊಸ ಹರುಷ ತಂತು..
ತೋರಲಿ ನಮ್ಮೆಲ್ಲರಿಗೂ ಹೊಸ ವರ್ಷಕ್ಕೆ ಹಾದಿ..
ನೀಡಲಿ ನಮ್ಮೆಲ್ಲರ ಬಾಳಿಗೂ ಬುನಾದಿ..
ಮತ್ತೆ ಬಂತು ಈ ಹಬ್ಬದ ಕ್ಷಣ..

ಬೆಲ್ಲದ ಸವಿಯ ತೋರುವ ನಮ್ಮ ಈ ಮನ..
ಬೇವನ್ನು ಕೂಡ ಬೆಲ್ಲವನ್ನಾಗಿ ಸ್ವೀಕರಿಸುವ ಈ ನಮ್ಮ ಗುಣ..
ನೂತನ ವರ್ಷದಲ್ಲಿ ಕೌಟುಂಬಿಕ ಜೀವನದಲ್ಲಿ ಸೌಹಾರ್ದತೆ ಇರಲಿ..
ಆರ್ಥಿಕವಾಗಿ ಸುಭದ್ರರಾಗಲು ನಮ್ಮ ಶ್ರಮ ಇರಲಿ..

ನಾವು ಕಂಡ ಕನಸು ಈ ಹೊಸ ವರ್ಷದಲ್ಲಿ
ಬೆಳಕಿನ ಜೊತೆ ಚಿಗುರಿ ಸಮೃದ್ಧವಾಗಿ ಬೆಳೆದು ನನಸಾಗಲಿ..
ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಹಿ ಸಿಂಚನ ಸಿಗಲಿ..
ನಿಮ್ಮ ಬಾಳಿನಲ್ಲಿ ಹೊಸ ಉತ್ಸಾಹ ನೆಮ್ಮದಿ ಇರಲಿ..
ಮತ್ತೆ ಮರಳಿ ಬಂತು ಯುಗ ಯುಗದ ಹಬ್ಬ ಈ ಯುಗಾದಿ..

ಅಶ್ವಿನಿ ಜೋಶಿ
ಗದಗ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.