You are currently viewing ಸ್ಮಾರಕ

ಸ್ಮಾರಕ

ಅಂದು ಸ್ವತಂತ್ರ ಪೂರ್ವದಂದು
ತನು ಮನ ತೊರೆದು ಕುಡಿ
ಕುಟುಂಬ ಬಿಟ್ಟು ಬಂಧು ಬಳಗ ಮರೆತು

ಸ್ವಾತಂತ್ರ್ಯಕ್ಕಾಗಿ ಪಣ್ಣತೊಟ್ಟುನಿಂತೆ.
ಇಂದಿನ ರಾಜಕಾರಣಿಗಳು
ಅಂತರಾತ್ಮಕ್ಕೆ ಹೆದರಿ

ಭದ್ರತಾ ಸಿಬ್ಬಂದಿಯಾಗಿ
ನಿನ್ನನು ವಿಧಾನ ಸೌದದ ಹೊರಗೆ ಇಟ್ಟಿದ್ದಾರೆ
ಆದರೆ, ಬೆವರು ಹರಿಸುವ ಕಾರ್ಮಿಕರು

ಗೌರವಾರ್ಥಕವಾಗಿ ಉದ್ಯಾನವನದಲ್ಲಿ
ಪ್ರತಿಷ್ಠಾಪಿಸಿ ಸ್ಮರಿಸಿ ಮೆರೆಸಿದ್ದಾರೆ
ಜನಸಂದಣಿಯ ನಡುವೆ

ಮೌನವಾಗಿ ನೀನು ಸ್ಮಾರಕವಾಗಿ
ನಿಂತಿದ್ದೀಯಾ ಗಾಂದಿ

ರತ್ನ ನಾಗರಾಜ್