You are currently viewing ಫಕೀರರು

ಫಕೀರರು

ಅವರು ಕಾವಿ ಧರಿಸಿಲ್ಲ
ಸನ್ಯಾಸಿ ದೀಕ್ಷೆ ಪಡೆದಿಲ್ಲ
ಮಠಾಧೀಶರೂ ಅಲ್ಲ
ಮಸೀದಿಯ ಮೌಲ್ವಿಯು ಅಲ್ಲ

ಚರ್ಚಿನ ಪಾದ್ರಿಯು ಅಲ್ಲ
ಮಂತ್ರಿ ಮಹೋದಯರು ಅಲ್ಲ
ವಿಶ್ವ ಕಂಡ ಶ್ರೇಷ್ಠ ಫಕೀರರು
ಸರಳ ಬದುಕು ಉನ್ನತ ವಿಚಾರ

ಎಲ್ಲರಂತೆ ತಪ್ಪು ಮಾಡಿದವರು
ತಪ್ಪಿನರಿಯು ಆದಮೇಲೆ
ವ್ಯಸನಗಳಿಂದ ಮುಕ್ತಿ ಪಡೆದ
ವಿಶ್ವ ಕಂಡ ಶ್ರೇಷ್ಠ ಫಕೀರರು

ಸತ್ಯ ಅಹಿಂಸೆಯೇ ಶಸ್ತ್ರ
ಸತ್ಯಾಗ್ರಹವೇ ಸ್ವಾತಂತ್ರ್ಯಕ್ಕೆ ಬ್ರಹ್ಮಾಸ್ತ್ರ
ಜಗತ್ತಿನಲ್ಲೊಂದು ಹೊಸ ಇತಿಹಾಸ ಬರೆದ
ವಿಶ್ವ ಕಂಡ ಶ್ರೇಷ್ಠ ಫಕೀರರು

ಸರ್ವೋದಯದ ಆರಾಧಕರು
ಸರ್ವರ ಉದಯದ ಚಿಂತಕರು
ಸರ್ವರ ಹೃದಯದಿ ಸಾರ್ವಕಾಲಿಕ
ನೆಲೆ ನಿಂತವರು

ಜಗತ್ತ ಕಂಡ ಅಪ್ರತಿಮ
ಅಸಾಧಾರಣ ಫಕೀರರು
ಅವರೇ ಮಹಾತ್ಮ ಗಾಂಧೀಜಿ .

ಗಣಪತಿ ಭೂರೆ
7353304510
9480297213