ವಿಶ್ವ ಓಝೋನ್ ದಿನಾಚರಣೆಯ ಶುಭಾಶಯಗಳು
ಜೀವರಕ್ಷಕ ಆಮ್ಲಜನಕ
ಸಕಲ ಚರಾಚರಕೂ ಅತ್ಯವಶ್ಯಕ
ಪರಿಸರ ಸ್ವಚ್ಛವಿದ್ದರೆ ಪ್ರಾಣ ವಾಯು
ಸುತ್ತಲೂ ಹಸಿರಿದ್ದರೆ ಶುದ್ಧ ಗಾಳಿಯು
ನೇರಳಾತೀತ ಕಿರಣಗಳಿಂದ
ರಕ್ಷಿಸುತ್ತಿರುವ ಓಝೋನ್ ಪದರವು
ಮಾಲಿನ್ಯ ಅತಿಯಾಗಿ
ಶಿಥಿಲಗೊಳ್ಳುತ್ತಿರುವ ರಕ್ಷಾಕವಚವು
ಮಾನವನ ಅವ್ಯಾಹತ ಚಟುವಟಿಕೆಯು
ಜೀವಜಂತುಗಳಿಗೆ ಮಾರಕವು
ಇಂದಿನ ಕೊರೋನಾ ಸ್ಥಿತಿಯಲ್ಲಿ ಅನುಭವಿಸಿದ ವೇದನೆಯು
ಎದ್ದು ಕಂಡಿತ್ತು ಆಮ್ಲಜನಕದ ಕೊರತೆಯು
ಎಲೈ ಮಾನವಾ, ನಿನಗೆಷ್ಟು ಹಕ್ಕಿದೆ?
ಪ್ರಕೃತಿಯ ನಾಶಮಾಡಲು….,.?
ಬೆಳೆಸು ನೀ ಗಿಡಮರವನು
ನಿಸರ್ಗ ಮರಳಿ ನೀಡುವುದು ಶುದ್ಧ ಗಾಳಿಯನು
ಓಝೋನ್ ಪದರವ ರಕ್ಷಿಸೋಣ
ಪರಿಶುದ್ಧ ಪ್ರಾಣವಾಯುವ ಪಡೆಯೋಣ
ಉಷಾ ನಾಯ್ಕ
ಸಿದ್ದಾಪುರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.