You are currently viewing ನಿನ್ನ ನೋಟದ ನಿತ್ಯೋತ್ಸವ

ನಿನ್ನ ನೋಟದ ನಿತ್ಯೋತ್ಸವ

ನಿನ್ನ ಪ್ರೀತಿ ನೀರಿನ ಹನಿಗಳಂತೆ
ನನ್ನ ಹೃದಯದಲ್ಲಿ ಹೊಳೆಯುತಿದೆ
ನಿನ್ನ ನಗು ಬೆಳಕಿನ ಬೆಳಗಿನಂತೆ
ನನ್ನ ಬದುಕಿಗೆ ಬಣ್ಣ ಹಚ್ಚುತಿದೆ

ನಿನ್ನ ಮಾತು ಚಂದಿರನ ನಯನ
ನನ್ನ ಕನಸಿಗೆ ಬೆಳಕು ತಂದಿದೆ
ನಿನ್ನ ಸ್ಪರ್ಶ ನದಿಯ ಹರಿವಂತೆ
ಮನದ ತಳದಲ್ಲಿ ಸಂಜೀವನವಾಗಿದೆ

ನಿನ್ನ ನೋಟ ಚಂದ್ರನ ಬೆಳಕಂತೆ
ನನ್ನೆದೆಯ ಸಪ್ತಸ್ವರ ಗೀತೆ
ನಿನ್ನ ಪ್ರೀತಿಯಲ್ಲಿ ಬಾಳುವೆ ನಾನು
ನಿನ್ನೊಂದಿಗೇ ಮುಗಿಯಲಿ ಈ ಜೀವನ ಪಥವೆ

ಪ್ರೇಮ ಪರ್ವದ ಈ ದಿನ
ನಿನ್ನ ಕುಣಿಸೋ ಸುಂದರ ಗಾನ
ನೀನೆಂಬ ಬೆಳಕಿನಲ್ಲಿ ನಾನು
ಜೀವನವನ್ನೆ ನಲಿವನನ್ನೆ ಕಂಡೆ

ಬಸವ.ವಿನಯ್(ವಿಪಿ)
ಯುವ ಕವಿ ಹಾಗೂ ಬರಹಗಾರರು
ಹರವೆ ಚಾಮರಾಜನಗರ









Leave a Reply