You are currently viewing ನೀ ನನ್ನ ಅಮ್ಮ

ನೀ ನನ್ನ ಅಮ್ಮ

ನೀ ನನ್ನ ದೇವತೆ
ನನ್ನ ಬಾಳ ಹಣತೆ
ನಿನ್ನ ಪ್ರೀತಿ ಮಮತೆ
ಬೆಳಗಿತೆನ್ನ ಜೀವ ಜ್ಯೋತಿ

ಈ ಜಗವ ತೋರಿಸಿ
ನನ್ನ ನೀನು ಮುದ್ದಿಸಿ
ನನಗೆ ಒಂದು ಹೆಸರಿಸಿ
ಎಲ್ಲರಿಗೂ ಗುರುತಿಸಿ

ನಿನ್ನ ಮಧುರ ಮಾತಿನಿಂದ
ನೀನಿತ್ತ ಶಿಕ್ಷಣ ಚಂದ
ನನ್ನ ಬಾಳು ಬೆಳಗಲೆಂದೆ
ನನ್ನಮ್ಮನಾಗಿ ಭುವಿಗೆ ಬಂದೆ

ಕಷ್ಟ ಸುಖದಿ ಒಂದೇ ಇರು
ಸದಾ ನೀನು ನಗುತಲಿರು
ಧೈರ್ಯ ದಿಂದ ಸಾಗುತಿರು
ಎಂದು ಹೇಳಿದ ಮೊದಲ ಗುರು

ಹೇಗೆ ತೀರಿಸಲಿ ಅಮ್ಮ
ನಿನ್ನ ಋಣವ ಈ ಜನುಮ
ದೇವರಲ್ಲಿ ಪ್ರಾರ್ಥಿಸುವೆನಮ್ಮ
ಜನುಮ ಜನುಮಕು
ನೀ ನನ್ನ ಅಮ್ಮ….

ಆರ್ ಡಿ ಜೋಶಿ
ಸಂಯೋಜಕರು,
ಗಣಕ ಯಂತ್ರ ವಿಭಾಗ,
ಎಸ್ ಬಿ ಕಲಾ ಹಾಗೂ ಕೆ ಸಿ ಪಿ ವಿಜ್ಞಾನ
ಮಹಾವಿದ್ಯಾಲಯ ವಿಜಾಪುರ
8050415730