You are currently viewing ನಾವುಗಳು ಹಿಂಗ್ಯಾಕೆ?

ನಾವುಗಳು ಹಿಂಗ್ಯಾಕೆ?

ಹೋಗುವ ದಾರಿಯಲ್ಲಿ
ಬೆಕ್ಕು ಬಂದರೆ ಅಪಶಕುನ ಅಂತಿವಿ
ರಾತ್ರಿ ವೇಳೆ ಶಕುನದ ಹಕ್ಕಿ ಕುಗಿದರೆ
ಭಯ ಪಡುತಿವಿ ನಾವುಗಳು ಹಿಂಗ್ಯಾಕೆ?

ಗಂಡು ಹೆಣ್ಣು ಸೇರುವ ಸಮಯದಲ್ಲಿ
ಘಳಿಗೆ ಮೂಹೂರ್ತ ನೋಡ್ತಿವಿ ಸೇರುವ
ಸಮಯ ಸರಿಯಿರದಿರೆ ಅಪಶಕುನ ಅಂತಿವಿ
ರಾಹುಕಾಲ ಗುಳಿಕಕಾಲ ಅಂತ ಪರದಾಡ್ತಿವಿ
ನಾವುಗಳು ಹಿಂಗ್ಯಾಕೆ?

ಮೂರು ದಿನದ ಬದುಕಿನಲ್ಲಿ
ನಾನು ನನ್ನದು ಅಂತಿವಿ
ಮರಣಿಸಿದಾಗ ಎಲ್ಲವನ್ನು
ಇಲ್ಲೇ ಬಿಟ್ಟು ಹೋಗ್ತಿವಿ

ನೇರವಾಗಿ ನುಡಿಯುವವರೆದುರು
ಉದಾಶಿನರಾಗ್ತಿವಿ
ನಯವಂಚಕರೆದುರು ಹಲ್ಕಿರಿದು ಸಾಗ್ತಿವಿ
ನಾವುಗಳು ಹಿಂಗ್ಯಾಕೆ?

ಬೇಳ್ಳಿ ಬಂಗಾರದ
ವ್ಯಾಮೋಹದಲ್ಲಿ ಅವರಿವರಿಗೆ
ಮೋಸ ಮಾಡ್ತಿವಿ ಹೆಣ್ಣು
ಮಣ್ಣಿಗೆ ಬಡ್ದಾಡಿ ಸಾಯ್ತಿವಿ
ನಾವುಗಳು ಹಿಂಗ್ಯಾಕೆ?

ಪಶು ಪಕ್ಷಿ ಪ್ರಾಣಿಗಳಿಗೆಕ್ಕಿಲ್ಲ ಈ ಮೋಹ

ರಾಹುಲ್ ಸರೋದೆ
ಕವಿ ಗಂಗಾವತಿ
ಮೊ : 9482448733


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.




This Post Has 2 Comments

  1. Rahul sarode

    Thank you for my poem published

    1. admin kbp

      ಧನ್ಯವಾದಗಳು ಸರ್ 🙏🏻

Comments are closed.