ಎದೆಯಾಗಿನ ಮಾತು
₹100.00
Author: ಮರುಳಸಿದ್ದಪ್ಪ ದೊಡ್ಡಮನಿ
Publishers Name: ಪ್ರಜ್ವಲ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
“ಹಚ್ಚುವ ಮನಸಿದ್ದ ಪ್ರೀತಿ ಹಂಚುವ ದೀಪಾ ಹಚ್ಚು. ಬ್ಯಾರೇರ ಎದಿಯಾಗ ಬೆಂಕಿ ಹಚ್ಚಬ್ಯಾಡ”
ಇಂತಹ ಎದೆ ಝಲ್ಲೇನ್ನುವ ಶಾಯಿರಿ ಓದಿದ ತಕ್ಷಣ ತಟ್ಟನೆ ನೆನಪಾಗುವ ಹೆಸರೆಂದರೆ, ಶ್ರೀ ಮರುಳಸಿದ್ದಪ್ಪ ದೊಡ್ಡಮನಿಯವರು. ಈ ನೆಲದ ತಳ ಮೂಲದ ಸಾಂಸ್ಕೃತಿಕ ಸೊಗಡಿನ ಕವಿ ಎಂದೆ ಹೆಸರಾದವರು. ಮೂರು ದಶಕಗಳಿಂದಲೂ ಹೆಚ್ಚು ಕಾಲ ಸಾಹಿತ್ಯಕ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಸಾಹಿತ್ಯದ ವಿವಿಧ ಮಜಲುಗಳಲ್ಲಿ ಹಲವಾರು ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸುತ್ತಲೇ, ತಮ್ಮದೆ ಆದ ಓದುಗ ಅಭಿಮಾನಿಗಳನ್ನು ಹೊಂದಿದ್ದಾರೆ.
“ಮರುಳನ ಶಾಯಿರಿ ಲೋಕ” ಎನ್ನುವ ಕಾಯಿರಿಯ ಸಂಕಲನದ ಮೂಲಕ ಶಾಯಿರಿ ಲೋಕದಲ್ಲಿ ತಮ್ಮದೇ ಆದ ಗಂಭೀರ ಹೆಜ್ಜೆಗಳನ್ನು ಇಡುತಾ ಇಂದು “ಎದೆಯಾಗಿನ ಮಾತು” ಎಂಬ ಎರಡನೇಯ ಶಾಯಿರಿ ಸಂಕಲನವನ್ನು ಈ ನಾಡಿನ ಶಾಯಿಲ ಸ್ತ್ರೀಯರ ಎದೆ ಬಡಿತವನು ಹೆಚ್ಚಿಸಲು ಪ್ರಕಟಿಸುತ್ತಿದ್ದಾರೆ. ಇಲ್ಲಿಯ ಪ್ರತಿಯೊಂದು ಶಾಯಿರಿಗಳು ಕೂಡ ವಿಭಿನ್ನ ಭಾವಗಳೊಂದಿಗೆ ವಿಭಿನ್ನ ನೆಲೆಯಲ್ಲಿ ಪ್ರೀತಿ, ಪ್ರೇಮ, ವಿರಹ, ಯೌವ್ವನದ ತಲ್ಲಣ, ತುಡಿತ ಹೀಗೆ ವಿವಿಧ ಭಾವಗಳನ್ನು ತಮ್ಮದೇ ಆದ ಗ್ರಾಮ್ಯ ಭಾಷೆಯ ಸೊಗಡಿನ ಮೂಲಕ, ಅತ್ಯಂತ ಸರಳ ಆಡುಮಾತಿನೊಂದಿಗೆ ಬರೆದಿದ್ದಾರೆ. ಪ್ರತಿಯೊಂದು ಶಾಯಿರಿ ಓದುಗರ ಎದೆಗೆ ಕಚಗುಳಿ ಇಟ್ಟು ಓದಗುರನ್ನು ತಮ್ಮ ಪ್ರೇಮಲೋಕದ ನೆನಪಿನ ಲೋಕಕ್ಕೆ ಎಳೆದೊಯ್ಯದೆ ಬಿಡಲಾರದು.
‘ಪ್ರೇಮಕ್ಕೆ ವಯಸ್ಸಾಗುವುದಿಲ್ಲ, ಪ್ರೇಮಕ್ಕೆ ಸಾವಿಲ್ಲ’ ಎನ್ನುವುದು ಈ ಶಾಯಿರಿ ಸಂಕಲನವನ್ನು ಓದುವ ಪ್ರತಿಯೊಬ್ಬರಿಗೂ ಅನಿಸದೆ ಇರಲಾರರು. ಇನ್ನು ಹೆಚ್ಚೆಚ್ಚು ಶಾಯಿರಿ ಸಂಕಲನಗಳು ಶ್ರೀಯರಿಂದ ಹೊರ ಬರರಂದ ರಿಸವ
ಸಾಹಿತಿಗಳು ಗೊಪ್ಪಳ,
ಯಲ್ಲಪ್ಪ ಮಲ್ಲಪ್ಪ ಜರ್ನಾಳಗಿ



Reviews
There are no reviews yet.