ಸತಿಯಾಗಿ ಜನಿಸಿದೆ ಪ್ರಕೃತಿ ರೂಪದಿ ಪರ್ವತ ರಾಜನುದರದಲಿ
ಶೈಲಪುತ್ರಿ ನೀ ನೆಲೆಸಿದೆ ಪರ್ವತ ನಂದಿಯ ಮೇಲೆ ಸವಾರಿ ಮಾಡುತಲಿ
ತಪಸನು ಗೈದೆ ಶಿವನನು ವರಿಸಲು ದಿಟ್ಟ ಮನದಲಿ
ಬ್ರಹ್ಮಚಾರಿಣಿ ನೀ ವರಿಸಿದೆ ಮಾದೇವನ ಅತೀವ ಪ್ರೀತಿಯಲಿ
ಅರ್ಧ ಚಂದ್ರನ ಧರಿಸಿದೆ ದೇವಿ ನೀ ಹುಲಿಯನು ಆರೋಹಿಸುತಲಿ
ಚಂದ್ರಘಂಟಾ ನೀ ಮಗ್ನಳಾದೆ ಭಕ್ತರ ಕಲ್ಯಾಣದಲಿ
ರವಿಯನು ಸೇರಿದೆ ಕಂಗೊಳಿಸುತ ಪ್ರಕಾಶಮಾನ ಬೆಳಕಿನಲಿ
ಕೂಷ್ಮಾಂಡಾ ನೀ ಸ್ರಷ್ಟಿಸಿದೆ ಬ್ರಹ್ಮಾಂಡವ ಮುಗುಳ್ನಗೆಯಲಿ
ಕಾರ್ತಿಕೇಯನ ಹೊತ್ತು ಸಾಗಿದೆ ಬೆಚ್ಚನೆಯ ಮಡಿಲಲಿ
ಸ್ಕಂದಮಾತಾ ನೀ ಅಸೀನಳಾದೆ ಪದ್ಮಾಸನದಿ ನಗುತಲಿ
ಮಹಿಷಾಸುರನ ಸೊಕ್ಕಡಗಿಸಿದೆ ದುಷ್ಟನ ಮರ್ದಿಸುತಲಿ
ಕಾತ್ಯಾಯನಿ ನೀ ಅವತರಿಸಿದೆ ದೇವತೆಗಳ ರಕ್ಷಿಸುತಲಿ
ಶುಂಭ ನಿಶುಂಭರ ಸಂಹರಿಸಿದೆ ಕಾಳರಾತ್ರಿಯ ರೂಪದಲಿ
ಮಹಾಗೌರಿ ನೀ ಉದ್ಧರಿಸು ಭಕ್ತರ ತಪ್ಪುಗಳ ಮನ್ನಿಸುತಲಿ
ಸಿದ್ಧಿಧಾತ್ರಿ ನೀ ನೀಡಿದೆ ಸಕಲಸಿದ್ಧಿಯ ಮಾತೃ ರೂಪದಲಿ
ನವರೂಪದಿ ಪೂಜೆಯ ಪಡೆದು ನೆಲೆಸು ಸದಾ ಭಕ್ತರ ಮನದಲಿ
ವೀಣಾ ವಿನಾಯಕ್
ಹೊನ್ನಾವರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ