You are currently viewing ನನ್ನ ಓಟು ನನ್ನ ಹಕ್ಕು

ನನ್ನ ಓಟು ನನ್ನ ಹಕ್ಕು

ಬಂದಿದೆ ನಮ್ಮಯ ಎಲೆಕ್ಷನ್
ಐದು ವರುಷಕ್ಕೊಮ್ಮೆ ಹಾಕುವ ಮತದಾನವದು
ನೀಡಿರಿ ನ್ಯಾಯಯುತ ಓಟು ಮರೆಯದೆ
ಆಯ್ಕೆಯಾಗಲಿ ಒಳ್ಳೆಯ ಅಭ್ಯರ್ಥಿ ಚುನಾವಣೆಗೆ

ಸೋಲದಿರಿ ಅವರಿವರ ಮಾತಿಗೆ ಎಲ್ಲಡೆ
ಮಾಡುವರು ಆಶ್ವಾಸನೆ ತುಂಬಿದ ಭಾಷಣವನ್ನು
ಎಪ್ಪತ್ತು ದಶಕ ಕಳೆದರೂ ನೀಗಿಲ್ಲ
ಬಡತನ, ನಿರುದ್ಯೋಗ, ಜಾತಿ ವಿದೆಎಲ್ಲಡೆ

ಸಾಲಾಗಿ ಹೋಗಿ ಒಬ್ಬೊಬ್ಬರಾಗಿ ಹೋಗುವದು
ಗಲಾಟೆ ಗೊಂದಲ ಸೃಷ್ಟಿ ಮಾಡದೆ ಇರುವುದು
ವಿದ್ಯಾವಂತರಾಗಿ ವಿನಯದಿಂದ ಮಾಡುವ ಓಟು
ವಿಜಯಶಾಲಿಗೆ ಬೆಂಬಲ ಮಾಡೋಣ ಮರೆಯದೆ

ಮುಂದಾದ್ರೂ ಬರುವ ಅಭ್ಯರ್ಥಿಗಳು ಮಾಡಲಿ
ಸಮಾಜದ ಒಳಿತು ಕೆಡಕುಗಳ ಯೋಚಿಸಲಿ
ದ್ವಂದ್ವನೀತಿ ತರದಂತೆ ಮಾಡಲಿ ಎಲ್ಲರೂ
ಜಾಗೂರುಕತೆ ಬೇಕಾಗಿದೆ ಪ್ರತಿ ಮನಸ್ಸಿನಲ್ಲೂ

ಒಂದೇ ಓಟು ಅದೇ ನನ್ನ ಹಕ್ಕು
ಎಲ್ಲಿದ್ದರೂ ಬಿಡದೆ ಮಾಡಿ ಪ್ರಜೆಗಳೆಲ್ಲ
ಯಾವ ಪಕ್ಷವಾದರೇನು ನಮಗೆ ಚುನಾವಣೆಗೆ
ಗೆದ್ದವ್ರು ಮಾಡಬೇಕು ಸಮಾಜದ ಉನ್ನತಿಗೆ

ಸವಿತಾ ಮುದ್ಗಲ್
ಗಂಗಾವತಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.