You are currently viewing ಮುಂಗಾರು ಮಳೆಯಲಿ ಸಿಂಗಾರಿ ಜೊತೆಯಲಿ

ಮುಂಗಾರು ಮಳೆಯಲಿ ಸಿಂಗಾರಿ ಜೊತೆಯಲಿ

ಒಲವು ಮನದಲಿ ಛಲವು ಎದೆಯಲಿ
ಇಬ್ಬರು ಕನಸಲಿ ಕಾಣುವ ಹೊಂಗನಸು
ಸ್ವರದ ಮಾದುರ್ಯದಿ ಬೆರೆತು ನಾದದಲಿ
ಹಲವು ರಾಗಾಗಳ ಝೆoಕಾರ ನೀಕಂಪಿಸು

ಹೃದಯ ಬಡಿತದ ನಿತ್ಯದ ಪರೀಕ್ಷೆಯು
ನಮಗೇ ಹೇಳುತಿದೆ ಪ್ರಣಯ ಗೀತೆಗಾಗಿ
ನಿನ್ನಯ ಒಲವಿನ ತಂಗಾಳಿ ನನ್ನದೆಯು
ಮರೆತು ಹಾಡುತಿದೆ ಆಂತರ್ಯ ದಾರಿಗಾಗಿ

ಹೂವಿನ ಮನಸ್ಸಿಗೆ ನಾನಿಂದು ಸೋತಿರಲು
ದುಂಬಿಯ ಹೃದಯವ ಮೆಲ್ಲನೆ ಕೆರೆಯಲು
ಮಧುನೀ ಸ್ವೀಕರಿಸಿ ಹೊರಟೆ ಎಲ್ಲೆಲ್ಲಿಯು
ರೂಪದ ಛಾಯೆಯಲ್ಲಿ ಮರೆತೆ ನಾನಿಲ್ಲಿಯು

ಮತ್ತದೆ ಶುರುವಿಂದು ಹೂಮಳೆ ಬಾನಿನಲಿ
ಮುಂಗಾರು ಮಳೆಯಲಿ ಸಿಂಗಾರಿ ಜೊತೆಯಲಿ

ಸವಿತಾ ಮುದ್ಗಲ್
ಗಂಗಾವತಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.