ಯಾವ ಜನ್ಮದ ಶತ್ರುವೋ ದೇವರು ಕ್ರೂರಿಯಾದ
ನನ್ನನ್ನೊಂದು ನಿಂತಲ್ಲೇ ನಿಲ್ಲುವ ಮರವಾಗಿಸಿದ
ಕಡಿದರೂ ಕೆರೆದುಕೊಳ್ಳಲು ಕೈಗಳಿಲ್ಲದಂತೆ ಮಾಡಿದ
ಬಡಿದರೂ ತಿರುಗಿ ಬೀಳದಂತೆ ಮೂಕನಾಗಿಸಿದ
ಹಾರುವ ಹಕ್ಕಿಗಳು ಬಂದು ಕೂತರು ಸುಮ್ಮನಿರುವೆ
ಮೈಮೇಲೆಲ್ಲ ಗೂಡು ಕಟ್ಟಿದರುಾ ಮೌನಿಯಾಗಿರುವೆ
ಹಣ್ಣುಗಳಿಗೆ ಕಲ್ಲು ಹೊಡೆದರೂ ಸಹನೆಯಿಂದಿರುವೆ
ಪುಟ್ಟ ಹಕ್ಕಿ ಕುಟುಕಿದರೂ ಕಣ್ಣೀರ ಜಿನುಗಿಸದಿರುವೆ
ಸಂತಸದಿಂದ ಕುಣಿದು ಕುಪ್ಪಳಿಸಲು ಬಿಡಲಿಲ್ಲವೇಕೆ
ನಿಂತು ಸಾಕಾದರೂ ನಡೆಯಲು ಬಿಡಲಿಲ್ಲವೇಕೆ
ಬೆತ್ತಲೆ ದೇಹಕ್ಕೆ ಬಟ್ಟೆ ತೊಡಲು ಬಿಡಲಿಲ್ಲವೇಕೆ
ಅಂದಕ್ಕೆ ಆಭರಣಗಳನ್ನು ತೊಡಲು ಬಿಡಲಿಲ್ಲವೇಕೆ
ಅನುದಿನ ಬಿಸಿಲು ಗಾಳಿ ಮಳೆ ಚಳಿಯ ಶಿಕ್ಷೆ
ರೋಗ ಬಂದರೂ ಹೋಗಿ ತೋರದ ಶಿಕ್ಷೆ
ಕೊಲ್ಲಲು ಕೊಡಲಿ ತಂದರೂ ಓಡಲಾಗದ ಶಿಕ್ಷೆ
ಸತ್ತು ಹೆಣವಾದರೂ ಯಾರೂ ನೋಡದ ಶಿಕ್ಷೆ
ಹಸಿದರು ಹೇಳಿಕೊಳ್ಳಲಾಗದ ಸ್ಥಿತಿ ನಿರ್ಮಿಸಿದ
ಭಾವನೆಗಳೇ ಇಲ್ಲದ ಬರಡು ಹೃದಯ ಇರಿಸಿದ
ಗೆಳೆಯರ ಜೊತೆಗೂಡಿ ಆಡುವ ಬಾಲ್ಯವ ಕಸಿದ
ತಾಯಿಯ ಕೈ ತುತ್ತು ಕಸಿದು ಸ್ವಾವಲಂಬಿಯಾಗಿಸಿದ
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ್
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.
ಚೆನ್ನಾಗಿದೆ ಕವನ ಸರ್
ಧನ್ಯವಾದಗಳು
ಮೂಕ ಜೀವಿಯ ಗೋಳು ಕೇಳಿ ನಾನು ಮೌನ ವಿಸ್ಮಿತೆ…
ಮೂಕ ಜೀವಿಯ ಗೋಳನು ಮೌನ ಜೀವಿಯು ಅರಿಯುವುದೆಂತೋ ನಾ ಕಾಣೆ….
ಚೆನ್ನಾಗಿದೆ ಸರ್ ನಿಮ್ಮ ಕವನ…
ಧನ್ಯವಾದಗಳು