You are currently viewing ಕಥಾ ಕಲ್ಯಾಣಿ ಕಥಾ ಸಂಕಲನ

ಕಥಾ ಕಲ್ಯಾಣಿ ಕಥಾ ಸಂಕಲನ

ಕೃತಿಯ ಪರಿಚಯ ಲೇಖಕಿ-ಶ್ರೀಮತಿ ನಳಿನಾ ದ್ವಾರಕನಾಥ್
ಗಣಕಯಂತ್ರ ಶಿಕ್ಷಕಿ
ಪುಸ್ತಕದ ಪ್ರಥಮ ಮುದ್ರಣ 2025
ಪುಸ್ತಕದ ಬೆಲೆ-150
ಪುಸ್ತಕದ ಮುಖಪುಟ ವಿನ್ಯಾಸ
ಪ್ರಕಾಶನ -ಮುಖಪುಟ ಚಿತ್ರಕಲೆ
ಅಕ್ಷರ ಜೋಡಣೆ-: ಪುಷ್ಕರ ಪ್ರಿಂಟರ್ಸ್ ಮತ್ತು ಪಬ್ಲಿಕೇಶನ್ಸ್

ಮುನ್ನುಡಿ-ಶ್ರೀಯುತ ಆರ್.ಪ್ರಸಾದ್ ಅವರು ಕನ್ನಡ ಪರ ಜನಪರ ಚಿಂತಕರು,ವಿಮರ್ಶಕರು
ಕನ್ನಡ ಗಣಕ ಉಚಿತ ತರಬೇತಿ ಸಂಸ್ಥೆಯ ಸಂಸ್ಥಾಪಕರು.
ಹೊನ್ನುಡಿ-ಎಸ್. ಆರ್
ರವೀಶ್.ಅವರು ಬರೆದು ಶುಭ ಕೋರಿರುವರು
ಬೆನ್ನುಡಿ-ಶ್ರೀಯುತ ಸಿಸಿರಾ ರಾಮಲಿಂಗೇಶ್ವರ ಅವರು,
ಅಧ್ಯಾಪಕರು ಬುಧ್ಧ ಬಸವ ಗಾಂಧಿ ಟ್ರಸ್ಟಿನ ಅಧ್ಯಕ್ಷರು ಶುಭ ಹಾರೈಸಿದ್ದಾರೆ.

ಆತ್ಮೀಯ ಸಹೃದಯ ಸಾಹಿತ್ಯಾಭಿಮಾನಿಗಳಿಗೆ ನನ್ನ ಪ್ರಣಾಮಗಳು. ಇದು ನನ್ನ ಚೊಚ್ಚಲ ಕಥಾ ಸಂಕಲನ. ಹುಟ್ಟಿದ್ದು ಸಂತೇಬಾಚಹಳ್ಳಿ ಸೇರಿದ್ದು ಬೆಂಗಳೂರು. ಶಾಲಾ ಸಮಯದಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಇತ್ತು. ಕಥೆ ಕವನ ನಾಟಕ ಕಾದಂಬರಿಗಳನ್ನು ಓದುವ ಹವ್ಯಾಸವಿತ್ತು. ಬಿ.ಕಾಂ. ಮುಗಿಯುವುದರೊಳಗೆ ಸಂಸಾರದ ಜಂಜಾಟದಲ್ಲಿ ಮುಳುಗಿದ್ದು ಆಯ್ತು. ನಂತರ ಲೇಖನ ಬರೆಯುವ ಆಸಕ್ತಿ ಮೊದಲಿನಿಂದಲೂ ಇತ್ತು. ಆದರೆ ಕೆಲ ಸಮಯ ಅದಕ್ಕೆ ವಿರಾಮ ಕೊಟ್ಟು ಸಾಂಸಾರಿಕ ಜೀವನ ನಡೆಸುತ್ತ ಮತ್ತೆ ಚಿಗುರಿತು ಮನದೊಳಡಗಿದ್ದ ಸಾಹಿತ್ಯಾಸಕ್ತಿ. ಅದಕ್ಕೊಂದು ಕಾರಣ ಬೇಕಲ್ಲವೇ ಅದೇ ಕೋವಿಡ್ ಸಂದರ್ಭ. ತಲೆಕೆಡಬೇಕಾದ ಸಮಯದಲ್ಲಿ ಬರಹಗಳ ಮೂಲಕ ಕಾಲ ಕಳೆಯುವ ಕವನ ಕತೆ ರಚಿಸುವ ಹವ್ಯಾಸ ಸಾಮಾಜಿಕ ಜಾಲತಾಣಗಳಿಂದ ಆರಂಭವಾಯಿತು. ಹಲವಾರು ಸಾಹಿತ್ಯ ಬಳಗಗಳ ಪ್ರೋತ್ಸಾಹದಿಂದ ಇಷ್ಟರ ಮಟ್ಟಿಗೆ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಲು ಕಾರಣವಾಯಿತು. ಎಲ್ಲಾ ಕವಿಮಿತ್ರ ವೃಂದದವರಿಂದ ನಾನು ಈ ಒಂದು ಹಂತಕ್ಕೆ ತಲುಪಿದ್ದೇನೆಂಬುವುದರಲ್ಲಿ ಸಂಶಯವಿಲ್ಲ. ಇನ್ನು ನನ್ನ ಕತೆಗಳನ್ನು ಓದಿ ತಪ್ಪುನೆಪ್ಪುಗಳನ್ನು ತಿದ್ದಿ ಪುಸ್ತಕ ರೂಪಕ್ಕೆ ತರಲು ಸಹಕರಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ.

ನನ್ನ ಈ ಕಥಾ ಕಲ್ಯಾಣಿಗೆ ಮುನ್ನುಡಿಯನ್ನು ಬರೆದುಕೊಟ್ಟು ಪ್ರೋತ್ಸಾಹ ನೀಡುತ್ತಿರುವ ಕನ್ನಡಪರ ಜನಪರ ಚಿಂತಕರು ವಿಮರ್ಶಕರು ವಿಶ್ಲೇಷಕರು ಕನ್ನಡ ಹೋರಾಟಗಾರರು ಆದ ಆರ್ ಎ ಪ್ರಸಾದ್ ಸರ್ ರವರಿಗೂ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ನನ್ನ ಕಥೆಗಳನ್ನು ಓದಿ ಪ್ರೋತ್ಸಾಹಿಸಿ ಬೆನ್ನುಡಿ ಬರೆದುಕೊಟ್ಟ ಡಾ. ಎಸ್.ರಾಮಲಿಂಗೇಶ್ವರ (ಸಿಸಿರಾ)ಸರ್ ರವರಿಗೂ ಮತ್ತು ನನ್ನ ಬರಹಗಳಿಗೆ ಬೆಂಬಲಿಸಿ ಹುರಿದುಂಬಿಸಿ ಪ್ರೋತ್ಸಾಹ ನೀಡಿ ಹೊನ್ನುಡಿ ಬರೆದ ನನ್ನ ಅಣ್ಣನವರಾದ ಎಸ್ ಆರ್ ರವೀಶ್ ರವರಿಗೂ ಮತ್ತು ಮುಖಪುಸ್ತಕದಿಂದ ಪರಿಚಯವಾಗಿ ಎಲ್ಲಾ ಕವಿಗೋಷ್ಠಿಗಳಿಗೂ ಜೊತೆಯಾಗಿ ಸದಾ ಬಿಡುವಿಲ್ಲದಂತೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಗೆಳತಿ ಪೂರ್ಣಿಮಾ ರಾಜೇಶ್ ರವರು ಆಶಯನುಡಿ ನೀಡಿದ್ದಕ್ಕಾಗಿ ಹೃದಯ ಪೂರ್ವಕ ಧನ್ಯವಾದಗಳನ್ನು ಹೇಳುತ್ತೇನೆ. ಮತ್ತು ನನ್ನ ಬರಹಗಳನ್ನು ಒಪ್ಪಿ ಓದಿ ಪ್ರೋತ್ಸಾಹ ನೀಡುವ ನೀಡುತ್ತಿರುವ ಪ್ರತಿಯೊಬ್ಬರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳನ್ನು ಹೇಳುತ್ತಾ ಮಂದೆಯು ಸಹ ನಿಮ್ಮೆಲ್ಲರ ಶುಭಹಾರೈಕೆ ಹೀಗೆ ಇನ್ನೂ ಹೆಚ್ಚಾಗಿ ಇರಲೆಂದು ಬಯಸುತ್ತೇನೆ ಹಾಗೂ ಸುಂದರವಾದ ವಿನ್ಯಾಸದೊಂದಿಗೆ ಈ ಕಥಾ ಸಂಕಲನವನ್ನು ಮದ್ರಿಸಿಕೊಟ್ಟ ಪುಷ್ಕರ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ನ ಅನಿತ.ಪಿ.ಕೆ ರವರಿಗೂ ತುಂಬುಮನದ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.









Leave a Reply