You are currently viewing ಕನ್ನಡ ನುಡಿ ಗೀತೆ

ಕನ್ನಡ ನುಡಿ ಗೀತೆ

ಕನ್ನಡ ತಾಯಿ ನಿನಗೆ ಶರಣು
ನಿನ್ನ ನಾಮ ಸ್ಮರಣೆ ನಮ್ಮ ಮಂತ್ರ
ಜಪಿಸುವೆ ಸದಾ ಅನುದಿನ ಅನುಕ್ಷಣ
ನಿನ್ನ ಶ್ರೀರಕ್ಷೆ ನಮಗೆ ಸದಾ ಇರಲಿ

ಕನ್ನಡ ನುಡಿಗೆ ಇದೆ ಶತಮಾನಗಳ ಇತಿಹಾಸ
ಅದನ್ನು ಅರಿಯುವ ತವಕ ಇಲ್ಲ ಇಂದಿನ ಜನಕೆ
ಕನ್ನಡ ಕಲಿಯುವುದೇ ಅಸಹ್ಯ ಎಂದು ಭಾವಿಸುತಿದೆ
ಇಂದಿನ ನವ ಪೀಳಿಗೆ ನವ ಜನಾಂಗ

ಕನ್ನಡ ಭಾಷೆ ಕಲಿಯಲು ಸುಲಭ ಆದರೆ
ಕಲಿತ ನಂತರ ಬಳಸುವುದಕ್ಕೆ ಕಷ್ಟ
ಕಷ್ಟಪಟ್ಟು ಕಲಿತರೆ ಉಳಿಯುವುದು ಕೆಲ ದಿನ
ಇಷ್ಟಪಟ್ಟು ಕಲಿತರೆ ಉಳಿಯುವುದು ಅನುದಿನ

ಕನ್ನಡ ಭಾಷೆ ಕಸ್ತೂರಿ ನಾತ
ಕನ್ನಡ ಭಾಷೆ ಗಂಧದ ಪರಿಮಳ
ಕನ್ನಡ ಭಾಷೆಗೆ ಇಲ್ಲ ಅಳಿವು, ಬಳಸದಿದ್ದರೆ
ಕನ್ನಡ ಭಾಷಿಕರಿಗೆ ಇಲ್ಲ ಉಳಿವು

ನಾಳೆಯೂ ಕನ್ನಡ ಭಾಷೆ ಉಳಿಯಬೇಕೆಂದರೆ
ಇAದೇ ಬಳಸುವ, ಬೆಳೆಸುವ ಕಾಯಕ ಮಾಡುತ
ಕಾಯಕವೇ ಕೈಲಾಸ, ಇರಬೇಕು ಇದ್ದು ಜಯಿಸಬೇಕು
ಅನ್ನುವ ಮಂತ್ರದ ಸಂಸ್ಕಾರವನು ಕೊಡಬೇಕು

ತಾಯ್ನಾಡಿನ ಋಣ ತೀರಿಸಲು ಆಗದು, ಆದರೆ
ಋಣದ ಭಾರವ ಕಡಿಮೆ ಮಾಡಿಕೊಳ್ಳಬಹುದು
ಅದಕ್ಕೆ ದಾರಿ ಒಂದೇ, ನಾವೂ ಕಲಿಯುತ ಕಲಿಸುತ
ಇನ್ನೊಬ್ಬರಿಗೆ ದಾರಿದೀಪವಾಗುತ ಸಾಗುವದು

ವೀ. ಯ. ಹೊಸೂರ.
ಕನ್ನಡ ಭಾಷಾ ಉಪನ್ಯಾಸಕರು,
ಅಸುಂಡಿ, ತಾ||ಸವದತ್ತಿ. ಜಿ|| ಬೆಳಗಾವಿ.
೯೫೩೫೭೨೨೮೫೧.