You are currently viewing ಹಾಯ್ಕುಗಳು

ಹಾಯ್ಕುಗಳು


ಪ್ರತಿ ದಿನವೂ
ಸುಡಲು ಬೇಡ ಹಸಿವೆ
ಒಮ್ಮೆ ದಹಿಸು.

ಹಸಿವೆಗಾಗಿ
ಅಲೆದಾಡುವ ಜೀವ.
ನೆಲೆ ಹುಡುಕು.

ಅರಸದಿರು
ನೆಲೆಯ; ಹೆಜ್ಜೆ ಊರಿ
ಬಿಡು ತಾಯ್ಬೇರು

ಹುಡುಕದಿರು
ಹೇ ಮನವೇ ದೇವನ;
ನಿನ್ನೊಳಿರುವ.

ಸತ್ಯ ಸೋಗಿನ
ಮುಖಗವಸ ಬೇಡ;
ಅಸತ್ಯ ನಕ್ಕಿತು.!

ಸ್ವಂತ ಬದ್ದಿಯ
ಅಧಿಕಾರ ನಡೆಸು;
ಸಾಧನೆ ಸಾಧ್ಯ !

ಚಾಡಿ ಹೇಳುವ
ಮಂದಿ ಮಾತು ಕಿವ್ಗಿಂಪು;
ಮನ್ಸಿಗೆ ನೋವು

ಹೆಂಡತಿ ಕಂಡ
ಗಂಡನಿಗೆ ನೆನಪಾತು
ಮಂಗಳಾರತಿ.

ಪ್ರೀತಿ ಅಂದರೆ
ಅಚ್ಚಡ ಪದ್ರಾಗಿನ
ಮಲ್ಲಿಗೆ ಹೂವು.
೧೦
ಪ್ರೀತಿ ಹಮಲು
ಸುಣ್ಣದ ಭಟ್ಟಿಯೊಳ;
ಕಲ್ಲು ಸುಟ್ಹಂಗ.
೧೧
ಕಾಲ ಚಕ್ರದಿ
ನೀ ಮರೆಯಾಗದಿರು
ಜೀವ ಜಾಲವೆ

ಗಂಗಾಧರ ಅವಟೇರ
ಶ್ರೀ ಮಹೇಶ್ವರ ಪ.ಪೂ.ಕಾಲೇಜು,ಇಟಗಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.