You are currently viewing ಹಾಯ್ಕುಗಳು

ಹಾಯ್ಕುಗಳು

ಜಡೆದ ಬೀಗ
ಎದೆಯಲಿ ಮೂಡದ
ಹೊಂಗಿರಣವ

ನೀಲಿ ಮುಗಿಲು
ಮುಂಗಾರು ಅಧಿವೇಶನ
ತಂಪೆರೆಯಲು

ನರ್ತಿಸುತ್ತಿದೆ
ಮಯೂರ ಗೋರಿ ಮುಂದೆ
ಅಶೃತರ್ಪಣ

ಕತ್ತಲ ಸುಳಿ
ಉಳಿಯ ಗಾನ ಕೇಳಿ
ಕಲ್ಲು ಹೂವಾಯ್ತು

ಭಾವ ಬೆಳಕು
ಹೊಸೆದ ಹೊಸ ಕಾವ್ಯ
ಇರುಳ ಓಟ

ಕಂಬನಿ ಕೂಡ
ಸಪ್ತ ಸಾಗರ ದಾಟಿ
ಹರಿಯುತಿದೆ

ಬರೀ ನೋವಿಗೆ
ಕಣ್ಣ ಕೊಳ ಉಕ್ಕಿತು
ಮುಗಿಲು ಖಾಲಿ

ತಪ್ಪ ಬಹುದೇ
ನೆರಳು ಬೆಳಕಿಗೂ
ನರಳಾಟವ

ರಂಭೆಯಂತಹ
ಸೊಸೆ ಕೈಯಲ್ಲಿ ಮಗ
ಕೈಗೊಂಬೆ ಯಾದ

ಎ ಎಸ್ ಮಕಾನದಾರ
ನಿರಂತರ ಪ್ರಕಾಶನ
ಎಂ ಆರ್. ಅತ್ತಾರ ಬಿಲ್ಡಿಂಗ್ ಅಮರೇಶ್ವರ ನಗರ 5ನೇ ಕ್ರಾಸ್
ರಿಂಗ್ ರೋಡ್ ಹತ್ತಿರ
ಗದಗ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.




?add-to-cart=2828