You are currently viewing ಹೈಕುಗಳು (ಹಬ್ಬಿ ನಗಲಿ  ಪ್ರೀತಿ)

ಹೈಕುಗಳು (ಹಬ್ಬಿ ನಗಲಿ ಪ್ರೀತಿ)


ದ್ವೇಷ ಅಳಿದು;
ಜಗದ ತುಂಬಾ ಹಬ್ಬಿ
ನಗಲಿ ಪ್ರೀತಿ.

ಎಲ್ಲರೆದೆಯು
ಬಾಗಿಲುಗಳಿಲ್ಲದ
ಗುಡಿಯಾಗಲಿ.

ಭಗವಂತನ
ಒಲುಮೆ ದೊರೆಯಲು
ಧ್ಯಾನವೇ ಅಸ್ತ್ರ.

ಮುಕ್ತವಾಗಲಿ
ಗುಡು ಚರ್ಚು ಮಸೀದಿ
ಎಲ್ಲರ ಬಾಳ್ಗೆ

ಮಾರುದ್ದ ಜಡಿ
ಆಕೆ;,ನೆನೆಪಿಲ್ಲೇನ
ಕದ್ದು ಮುತ್ತಿದ್ದು

ಮುಂಗೂರುಳಿನ
ಆಟ ಇಣಕಿ ನೋಡಿ
ನಾಚ್ಯಾವ ದುಂಬಿ;

ಮಕರಂದವ
ಹೀರು ದುಂಬಿ ;ಹುಡುಗಿ
ಗಲ್ಲ,ಮುತ್ತುಗ

ಇನ್ನೊಬ್ಬರನು
ಹಿಂದಾಡಿಕೊಳ್ಳದಿರು
ಗೋಡೆಗೂ ಕಿವಿ !

ರಾಜಕೀಯದಿ
ಡೊಂಬರಾಟದಲ್ಲೀಗ
ಸತ್ಯದ ಸಾವು
೧೦
ಧರಣಿ ಕಲಾಪ
ಬಂದ;ಮಣ್ಣುಪಾಲಾದ
ಜನರ ಆಸೆ.
೧೧
ಬಾವಿಗಿಳಿದ
ವಿರೋಧ ಪಕ್ಷಗಳು.
ಬತ್ತಿದ ಬಾವಿ !

ಗಂಗಾಧರ ಅವಟೇರ
ಶ್ರೀ ಮಹೇಶ್ವರ ಪ.ಪೂ.ಕಾಲೇಜು,ಇಟಗಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.