ಹೆತ್ತ ಕಂದನ ಹಣೆಗೆ ಮುದ್ದಿಸಿ ಹರ್ಷದಿ ಬಾಗಿಹಳು ತಾಯಿ
ಹೊತ್ತ ಭೂಮಿಯ ಋಣ ತೀರಿಸುವತ್ತ ಸಾಗಿಹಳು ತಾಯಿ
ಅಮ್ಮ ಮಗುವಿನ ಬಾಂಧವ್ಯದ ನಂಟಿಗೆ ಸಾಟಿಯುಂಟೆ
ಇಮ್ಮನವ ತೋರದೆ ವಾತ್ಸಲ್ಯದಿ ಬೆಳೆಸುತ ಬೀಗಿಹಳು ತಾಯಿ
ಅದ್ಭುತ ಸೃಷ್ಟಿ ಆ ದೇವನ ಕೊಡುಗೆ ಪ್ರತಿ ಮನೆಮನೆಗೆ
ತಿದ್ದುತ ಸಂತಾನ ಜಗಕೆ ಅರ್ಪಿಸಿ ಮೌನದಿ ಮಾಗಿಹಳು ತಾಯಿ
ಸರ್ವಾಂಗ ಸುಂದರ ಬದುಕ ಮುದದಿ ನೀಡುತ ಕಾರಣವಾಗಿಹಳು
ಭಂಗ ಬಾರದ ತೆರದಿ ಜೋಗುಳ ಹಾಡುತ ತೂಗಿಹಳು ತಾಯಿ
ತಾಯ್ತನ ಹೆಣ್ಣಿಗೆ ಕನಸಿನ ಕುಡಿಯ ಹಿರಿದಾದ ಬಯಕೆ ಸಹಜವಲ್ಲವೇ
ಸತಿತ್ವ ಧರ್ಮ ಪಾಲಿಸುತ ಕಂದನ ಚಾಕರಿಯ ನಿಜದಿ ನೀಗಿಹಳು ತಾಯಿ
ಜಯಶ್ರೀ ಭ ಭಂಡಾರಿ
ಬಾದಾಮಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.