You are currently viewing ಗಝಲ್

ಗಝಲ್

ಪ್ರೀತಿಯಲಿ ಸಿಗುವ ಸುಖ ಪಂಜರದಲ್ಲಿ ಸಿಗದು ಎಂದು ಹಾರಿದೆಯಾ ಖಗ
ನೀತಿ ನಿಯಮ ಮೀರಿದ ಬದುಕು ಬೋರೆನಿಸಿ ಗೂಡು ಸೇರಿದೆಯಾ ಖಗ.

ಸ್ವಾತಂತ್ರ್ಯ ಪ್ರತಿ ಜೀವಿಗೆ ದೇವರು ನೀಡಿದ ಅಮೂಲ್ಯ ವರವಲ್ಲವೇ
ಪಾರತಂತ್ರ್ಯದ ಸರಳುಗಳ ಹಿಂದೆ ಎಲ್ಲವೂ ಕಹಿಯೆಂದು ಸಾರಿದೆಯಾ ಖಗ.

ಪೃಕೃತಿಯ ಮಾತೆಯ ಮಡಿಲಲ್ಲಿ ಹಸಿರು ಸಿರಿಯ ಮೆಲ್ಲುತ ಉಲಿಯಬೇಕಿದೆ.
ಸುಕೃತ ಫಲವು ಒದಗಿ ಬಂದಾಗಿದೆ ಗಾಜನು ಸರಿಸುತ ಏರಿದೆಯಾ ಖಗ

ಮಮತಾಮಯಿ ತಾಯಿಯ ಹುಡುಕುತ ಹೊರ ಬಂದೆಯಾ ನೀನು
ಸಮಾನತೆ ಗಾಳಿಗೆ ಮೈಅರಳಿಸುತ ಸೊಬಗಿನ ಸೋಬಾನೆ ಹೀರಿದೆಯಾ ಖಗ.

ಬಾನಾಡಿಗಳಲಿ ಒಲವು ನಲಿವು ಇರುವುದೆಂದು ತಿಳಿಯದಷ್ಟು ದಡ್ಡಳಲ್ಲ ಜಯ
ಹೋರಾಡಿ ಮೂಕ ರಾಗದಲಿ ಬಾಳುವ ಕಲೆ ಕರಗತವು ಮೀರಿದೆಯಾ ಖಗ.

ಜಯಶ್ರೀ ಭ ಭಂಡಾರಿ
ಬಾದಾಮಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.