ಸೊಸೆ ಮನೆಯ ತೊರೆದರೆ
ಸಂಸಾರಕ್ಕೇಲ್ಲಿಯ ಬೆಲೆ
ರೈತ ಹೊಲವ ಮರೆತರೆ
ಒಕ್ಕಲುತನಕ್ಕೇಲ್ಲಿಯ ಬೆಲೆ
ವಿದ್ಯಾರ್ಥಿ ಶಾಲೆಗೆ ಗೈರಾದರೆ
ಶಿಕ್ಷಣಕ್ಕೇಲ್ಲಿಯ ಬೆಲೆ
ಗುರು ಮಠವ ತ್ಯಜಿಸಿದರೆ
ಸನ್ಯಾಸತ್ವಕ್ಕೇಲ್ಲಿಯ ಬೆಲೆ
ವಿಶ್ವಾಸದ ಕೊಂಡಿ ಕಳಚಿದರೆ
ಸ್ನೇಹಕ್ಕೇಲ್ಲಿಯ ಬೆಲೆ
ಕೆಂಡ ಕುಲುಮೆಯಲಿ ತನ್ನಗಾದರೆ
ಕಬ್ಬಿಣಕ್ಕೇಲ್ಲಿಯ ಬೆಲೆ
ಅಕ್ಕಿ ಒಲೆಯ ಮುನಿಸಿದರೆ
ಅನ್ನಕ್ಕೇಲ್ಲಿಯ ಬೆಲೆ
ಮರ ಮಣ್ಣನು ಕಳಚಿದರೆ
ಹಸುರಿಗೆಲ್ಲಿಯ ಬೆಲೆ
ವೀಣೆ ಬೆರಳ ಮೀಟಲೋಲ್ಲದಿರೆ
ಸಂಗೀತಕ್ಕೆಲ್ಲಿಯ ಬೆಲೆ
ಸಾಜನ್ ನ ತೋಳಿನಸಾರೆ ಸಿಗದಿರೆ ಪ್ರಣಯಕ್ಕೆಲ್ಲಿಯ ಬೆಲೆ
ಎ. ಎಸ್. ಮಕಾನದಾರ
ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.